ರಾಜಕೀಯ ಪ್ರವೇಶ : ಬಿಗ್ಬಿ ಸಲಹೆ ಪಡೆಯಲು ರಜನಿ ನಿರ್ಧಾರ
ಚೆನ್ನೈ,ಜೂ.28-ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸುದ್ದಿ ಈಗಾಲಗೇ ದೇಶಾದ್ಯಂತ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದ ಸರಿಯಷ್ಟೇ. ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಅವರ ಅನೇಕ ಅಭಿಮಾನಿಗಳು, ಕುಟುಂಬದವರು, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ತಾನು ರಾಜಕೀಯ ಪ್ರವೇಶಿಸಬೇಕೆ ಅಥವಾ ಬೇಡವೆ ಎಂಬ ಸಂದಿಗ್ಧತೆಯಲ್ಲಿ ಸೂಪರ್ ಸ್ಟಾರ್ ಇದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಗ್ಬಿ ಖ್ಯಾತಿಯ, ತನ್ನ ಪರಮಾಪ್ತ ಅಮಿತಾಬ್ ಬಚ್ಚನ್ ಅವರ ಸಲಹೆ ಪಡೆದು ಅವರ ಅಭಿಪ್ರಾಯದಂತೆ ಮುನ್ನಡೆಯಲು ರಜನಿಕಾಂತ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ಅಭಿಮಾನಿಗಳಲ್ಲಿ ಕೆಲವರು, ಕೆಲವು ರಾಜಕೀಯ ಪಕ್ಷಗಳ ನಾಯಕರು, ರಜನಿಕಾಂತ್ ರಾಜಕೀಯಕ್ಕೆ ಬರಬೇಕು ಎಂದರೆ ಇನ್ನು ಕೆಲವರು ಅವರು ರಾಜಕೀಯಕ್ಕೆ ಬರುವುದು ಸರಿಯಲ್ಲ ಎಂಬ ಮನಸ್ಥಿತಿಯಲ್ಲಿದ್ದಾರೆ. ಈ ಎಲ್ಲ ಗೊಂದಲಗಳ ನಿವಾರಣೆಗೆ ರಜನಿಕಾಂತ್ ಅಮಿತಾಬ್ ಅವರ ಸಲಹೆ ಪಡೆಯಲು ಮುಂದಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >