ರಾಜಕೀಯ ಹೋರಾಟಕ್ಕೆ ಸಿದ್ಧರಾಗುವಂತೆ ಅಭಿಮಾನಿಗಳಿಗೆ ತಲೈವಾ ಕರೆ

Spread the love

Rajanikanth
ಚೆನ್ನೈ, ಮೇ 19-ಮುಂದಿನ ದಿನಗಳಲ್ಲಿ ತಮಿಳುನಾಡು ಹೊಸ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾಗುವ ಮುನ್ಸೂಚನೆಯನ್ನು ಸೂಪರ್‍ಸ್ಟಾರ್ ರಜನಿಕಾಂತ್ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಸಕ್ರಿಯ ರಾಜಕೀಯ ರಂಗ ಸೇರುವ ಬಗ್ಗೆ ಈಗಾಗಲೇ ತಿಳಿಸಿರುವ ತಲೈವಾ ಹೋರಾಟಕ್ಕೆ ಸಜ್ಜಾಗುವಂತೆ ಅಸಂಖ್ಯಾತ ಅಭಿಮಾನಿಗಳಿಗೆ ಇಂದು ಕರೆ ನೀಡುವ ಮೂಲಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.  ಚೆನ್ನೈನ ರಾಘವೇಂದ್ರ ಮಂಟಪಂನಲ್ಲಿ ಇಂದು ಕೂಡ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಫೋಟೋ ಕಾರ್ಯಕ್ರಮದಲ್ಲಿ ರಜನಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಹುರಿದುಂಬಿಸುವ ಮಾತುಗಳನ್ನಾಡಿದರು. ಮುಂದೆ ತಮಿಳುನಾಡಿನ ಹೊಸ ಪರಿವರ್ತನೆಯ ಗಾಳಿ ಬೀಸಲಿದೆ. ಇದಕ್ಕೆ ನೀವೆಲ್ಲರೂ ಸಿದ್ಧರಾಗಿರಬೇಕೆಂದು ಕಿವಿಮಾತು ಹೇಳಿದರು.ನಾನು ತಮಿಳಿಗ ಅಲ್ಲ ಎಂಬ ಬಿಜೆಪಿ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿಯವರಿಗೆ ತಲೈವಾ ಫಿಲ್ಮಿ ಸ್ಟೈಲ್‍ನಲ್ಲಿ ವಾಗ್ದಾಳಿ ಮೂಲಕ ತಿರುಗೇಟು ನೀಡಿದರು. ನನ್ನ ಮಾತೃಭಾಷೆ ಮರಾಠಿ ನಿಜ. ನಾನು 23 ವರ್ಷ ಕರ್ನಾಟಕದಲ್ಲಿ ನೆಲೆಸಿದ್ದೆ. ಹೀಗಾಗಿ ಕನ್ನಡ ಭಾಷೆ ನನಗೆ ಚೆನ್ನಾಗಿ ಗೊತ್ತು. ಆದರೆ ನಾನು ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ. ನಾನು ತಮಿಳುನಾಡಿನಲ್ಲಿ 44 ವರ್ಷ ಕಳೆದಿದ್ದೇನೆ. ತಮಿಳರ ಹಿತಾಸಕ್ತಿಯೇ ನನ್ನ ಧ್ಯೇಯ. ನಾನು ಅಪ್ಪಟ ತಮಿಳಿಗ ಎಂದು ರಜನಿ ಅಭಿಮಾನಿಗಳ ಕಿವಿಗಡಚಿಕ್ಕುವ ಕರತಾಡನದ ನಡುವೆ ಘೋಷಿಸಿದರು.
ರಾಜಕೀಯಕ್ಕೆ ಆಧ್ಯಾತ್ಮಿಕ ಸ್ಪರ್ಶ: ರಜನಿಗೂ ಆಧ್ಯಾತ್ಮಿಕಕ್ಕೂ ಅವಿನಾಭಾವ ಸಂಬಂಧ. ಅವರ ಅನೇಕ ಸಿನಿಮಾಗಳಲ್ಲಿ ಈ ಅಂಶವನ್ನು ತದ್ವಾತ್ತಾಗಿ ನೋಡಬಹುದು. ಅದರಲ್ಲೂ ವಿಶೇಷವಾಗಿ ಬಾಬಾ ಚಿತ್ರದಲ್ಲಿ ಆಧ್ಯಾತ್ಮಿಕತೆಯ ಅಗಾಧ ಶಕ್ತಿಯನ್ನು ರಜನಿ ಪರದೆ ಮೇಲೆ ಹೇಳುತ್ತಾ ಹೋಗುತ್ತಾರೆ. ಅದರಲ್ಲಿ ಮುದ್ರಾ ಚಿಹ್ನೆ ಜನಪ್ರಿಯ ರಜನಿಕಾಂತ್ ಅಭಿಮಾನಿಗಳ ಭೇಟಿ ಕಾರ್ಯಕ್ರಮದ ವೇದಿಕೆ ಹಿಂದೆಯೂ ಅದೇ ಚಿಹ್ನೆ ರಾರಾಜಿಸುತ್ತಿತ್ತು. ಬಹುಶಃ ರಜನಿ ಪ್ರಾದೇಶಿಕ ರಾಜಕೀಯ ಪಕ್ಷದ ಚಿಹ್ನೆಯೂ ಅದೇ. ಹೀಗಾಗಿ ರಾಜಕೀಯಕ್ಕೂ ಅವರು ಆಧ್ಯಾತ್ಮಿಕ ಸ್ಪರ್ಶ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin