ರಾಜಧಾನಿ ದೆಹಲಿ ಸೇರಿ ದೇಶಾದ್ಯಂತ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ದಾಳಿ

CBI--01

ನವದೆಹಲಿ/ಕೊಲ್ಕತ, ಜು.12- ದೇಶದಲ್ಲಿ ತಲೆ ಎತ್ತಿರುವ ನಕಲಿ ಕಂಪನಿಗಳು ಮತ್ತು ಹವಾಲಾ ದಲ್ಲಾಳಿಗಳ ವಿರುದ್ಧ ಕೇಂದ್ರೀಯ ತನಿಖಾ ದಳದ(ಸಿಬಿಐ) ಅಪರಾಧ ನಿಗ್ರಹ ವಿಭಾಗದ ಅಧಿಕಾರಿಗಳು ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ರಾಜಧಾನಿ ದೆಹಲಿ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಂದು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಸಿಬಿಐ ತಂಡ ಭಾರೀ ಪ್ರಮಾಣದ ಅಕ್ರಮ ವಹಿವಾಟು ಹಾಗೂ ಠೇವಣಿ ಹಣವನ್ನು ಪತ್ತೆ ಮಾಡಿದೆ. ಅನೇಕ ನಕಲಿ ಕಂಪನಿಗಳು ಮತ್ತು ಹವಾಲಾ ಬ್ರೋಕರ್‍ಗಳು ಅಪಾರ ಪ್ರಮಾಣದ ಹಣ ಅವ್ಯವಹಾರದಲ್ಲಿ ತೊಡಗಿದ್ದು, ವಿದೇಶಿ ಬ್ಯಾಂಕ್‍ಗಳು ಮತ್ತು ದೇಶದ ವಿವಿಧೆಡೆ ಬೇನಾಮಿ ಖಾತೆಗಳಲ್ಲಿ ದೊಡ್ಡ ಮೊತ್ತದ ಠೇವಣಿ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದೆಹಲಿ, ಕೊಲ್ಕತ್ತಾ ಮತ್ತು ರಾಂಚಿ ನಗರಗಳೂ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ಧಾರೆ.

ಬೆಳಕು ಹರಿಯುವುದಕ್ಕೂ ಮುನ್ನವೇ ವಿವಿಧ ರಾಜ್ಯಗಳಲ್ಲಿನ ನಕಲಿ ಕಂಪನಿಗಳ ಮಾಲೀಕರು ಮತ್ತು ಹವಾಲಾ ದಲ್ಲಾಳ್ಳಿಗಳಿಗೆ ಶಾಕ್ ನೀಡಿದ ಸಿಬಿಐ ತಂಡ, ಶೋಧ ಕಾರ್ಯಾಚರಣೆ ಮುಂದುವರಸಿ ಭಾರೀ ಅಕ್ರಮ-ಅವ್ಯವಹಾರಗಳನ್ನು ಪತ್ತೆ ಮಾಡಿದೆ.  ಬೇನಾಮಿ ಮತ್ತು ನಕಲಿ ಸಂಸ್ಥೆಗಳನ್ನು ನಡೆಸುತ್ತಿರುವ ಮಾಲೀಕರು ಹಾಗೂ ಅಕ್ರಮವಾಗಿ ಹವಾಲಾ ದಂಧೆ ನಡೆಸುವ ಕುಳಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ. ಈ ಕಾರ್ಯಾಚರಣೆ ವೇಳೆ ಅಕ್ರಮಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲ್ಕತದ ಅಲಿಪುರ್‍ನಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯ ಪ್ರಧಾನ ಆಯುಕ್ತರೂ ಸೇರಿದಂತೆ ಉನ್ನತಾಧಿಕಾರಿಗಳ ಮನೆ ಮೇಲೂ ಹಠಾತ್ ರೇಡು ಮಾಡಿದ ಸಿಬಿಐ ಅಧಿಕಾರಿಗಳು ನಕಲಿ ದಾಖಲೆಪತ್ರಗಳು ಮತ್ತು ಹಣ ಠೇವಣಿ ಪ್ರಮಾಣ ಪತ್ರಗಳನ್ನೂ ಸಹ ಜಪ್ತಿ ಮಾಡಿದ್ಧಾರೆ.  ದೇಶಾದ್ಯಂತ ತಲೆ ಎತ್ತಿರುವ ನಕಲಿ ಮತ್ತು ಬೇನಾಮಿ ಹೆಸರಿನ ಕಂಪನಿಗಳನ್ನು ಮಟ್ಟ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಘೋಷಿಸಿದ್ದರು. ಅದರ ಬೆನ್ನಲ್ಲೇ ಈ ಸರಣಿ ದಾಳಿಗಳು ನಡೆದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin