ರಾಜಸ್ಥಾನದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಯೋಧ ಈರಪ್ಪ : ಇಂದು ಸಂಜೆ ಅಂತ್ಯಕ್ರಿಯೆ

Spread the love

Eerappa--01

ಮುಂಡರಗಿ,ಮಾ.24- ರಾಜಸ್ಥಾನದ ಅಲ್ವಾರ್‍ನಲ್ಲಿ ಅನಾರೋಗ್ಯದಿಂದ ನಿನ್ನೆ ಮೃತಪಟ್ಟ ಯೋಧ ಈರಪ್ಪ ಮಲ್ಲಪ್ಪ ಹುರಳಿ(36) ಅವರ ಮೃತದೇಹ ಇಂದು ಸಂಜೆ 4.30ಕ್ಕೆ ಸ್ವಗ್ರಾಮ ಪೆಠಾಲೂರಕ್ಕೆ ಬರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.  ಮೃತದೇಹದ ಸಾರ್ವಜನಿಕ ದರ್ಶನಕ್ಕೆ ಗ್ರಾಮದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದ ಜಿಲ್ಲಾಡಳಿತ ರಾಜಸ್ಥಾನದಿಂದ ವಿಶೇಷ ವಿಮಾನದಲ್ಲಿ ಪಾಥೀವ ಶರೀರ ಬರಲಿದೆ. ಸರ್ಕಾರದ ಪರವಾಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಯೋಧನ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಈಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಸ್ಮಶಾನ ಮೌನ ವಾತಾವರಣವುಂಟಾಗಿದೆ. ಯೋಧನ ತಂದೆ, ತಾಯಿ, ಪತ್ನಿ, ಹಾಗೂ ಅಪಾರ ಬಂಧು-ಬಳಗದವರು ಕಣ್ಣರಿಟ್ಟ ದೃಶ್ಯ ಮನಕಲುಕುವಂತೆ ಇತ್ತು. ಗ್ರಾಮದ ಹಿರಿಯರು ಗಣ್ಯರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin