ರಾಜಸ್ಥಾನದಲ್ಲಿ ಶಂಕಿತ ಐಎಸ್‍ಐ ಏಜೆಂಟ್ ಸೆರೆ

Spread the love

ISIS--01

ಜೈಪುರ್,ಮೇ 20-ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ(ಐಎಸ್‍ಐ) ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಏಜೆಂಟ್ ಒಬ್ಬನನ್ನು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.   ಜೈಸಲ್ಮೇರ್ ನಿವಾಸಿಯಾದ ಈತನನ್ನು ನಿನ್ನೆ ರಾಜಸ್ಥಾನದ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಅಧಿಕಾರಿಗಳು ಬಂಧಿಸಿದ್ದು , ಹೆಚ್ಚಿನ ವಿಚಾರಣೆಗಾಗಿ ಜೋದ್‍ಪುರ್‍ಗೆ ಕರೆದೊಯ್ಯಲಾಗಿದೆ ಎಂದು ಎಡಿಜಿ(ಗುಪ್ತಚರ) ಯು.ಆರ್.ಸಾಹು ತಿಳಿಸಿದ್ದಾರೆ. ಈತ ಐಎಎಸ್ ಜೊತೆ ಸಂಪರ್ಕ ಹೊಂದಿರುವುದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಈತನ ಚಲನವಲನಗಳ ಮೇಲೆ ನಿಗಾ ಇರಿಸಿ ನಂತರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin