ರಾಜೀನಾಮೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಎಸ್ಐ ಕಬ್ಬಾಳ್ರಾಜ್ ಪತ್ತೆ
ಉಡುಪಿ, ಸೆ.23-ರಾಜೀನಾಮೆ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಸಬ್ಇನ್ಸ್ಪೆಕ್ಟರ್ ಕಬ್ಬಾಳ್ರಾಜ್ ಪತ್ತೆಯಾಗಿದ್ದಾರೆ!ಹಿರಿಯ ಅಧಿಕಾರಿಗಳ ಕಿರುಕುಳ ಹಾಗೂ ವೈಯಕ್ತಿಕ ಕಾರಣ ನೀಡಿ ಹಿರಿಯ ಪೊಲೀಸ್ ಅಧಿಕಾರಿ ಬಾಲಕೃಷ್ಣ ಅವರ ಕಚೇರಿಗೆ ಬಂದು ರಾಜೀನಾಮೆ ಪತ್ರ ಇಟ್ಟು ಹೋಗಿದ್ದ ಕಬ್ಬಾಳ್ರಾಜ್ ಅವರನ್ನು ಹುಡುಕಲು ಭಾರೀ ಸಾಹಸವನ್ನೇ ಮಾಡಬೇಕಾಯಿತು.ಕೊನೆಗೂ ಅವರು ಬಂಟ್ವಾಳದಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಇಂದು ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ. ಇದೇ ವೇಳೆ ತಾವು ಕರ್ತವ್ಯಕ್ಕೆ ಹಾಜರಾಗುವುದಾಗಿ ಕಬ್ಬಾಳ್ರಾಜ್ ತಿಳಿಸಿದ್ದಾರೆ. ಇವರ ಸಮಸ್ಯೆ ಬಗ್ಗೆ ಕುಳಿತು ಚರ್ಚಿಸಿ ಬಗೆಹರಿಸಲಾಗಿದೆ. ಯಾವುದೇ ಗೊಂದಲ ಇಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.