ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಸೌರಶಕ್ತಿಯಿಂದ 705.367ಮಿ.ಯೂ. ವಿದ್ಯುತ್ ಉತ್ಪಾದನೆ

Solar-Power

ಬೆಂಗಳೂರು, ಮಾ.17- ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಸೌರಶಕ್ತಿಯಿಂದ 705.367ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸೌರಶಕ್ತಿ ವಿದ್ಯುತ್ ಉತ್ಪಾದನೆಯನ್ನು ಜನಪ್ರಿಯಗೊಳಿಸಲು 2014-21ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದರಂತೆ 6ಸಾವಿರ ಮೆಗಾವ್ಯಾಟ್ ಸಾಮಥ್ರ್ಯದ ಸ್ಥಾವರಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 6178 ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ವಿದ್ಯುತ್ ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಸೌರಶಕ್ತಿ ವಿದ್ಯುತ್ ಉತ್ಪಾದನೆ ಬಗ್ಗೆ ಜನ ಜಾಗೃತಿ ಮೂಡಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸೌರಶಕ್ತಿ ವಿದ್ಯುತ್ ಘಟಕ ಸ್ಥಾಪಿಸುವವರಿಗೆ ಕೈಗಾರಿಕಾ ನೀತಿಯಡಿ ಸಿಗುವ ಎಲ್ಲಾ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇನ್‍ವರ್ಟರ್ ಮತ್ತು ಸೋಲಾರ್ ಟಿವಿ ಚಾನಲ್‍ಗಳಿಗೆ ವ್ಯಾಟ್ ವಿನಾಯ್ತಿ ನೀಡಲಾಗಿದೆ.   ನವೀಕರಿಸಬಹುದಾದ ಇಂಧನ ಯೋಜನೆಯ ಯಂತ್ರೋಪಕರಣಗಳಿಗೆ ಪ್ರವೇಶ ತೆರಿಗೆಯನ್ನು ತೆಗೆದು ಹಾಕಲಾಗಿದೆ. ಸೌರಯೋಜನೆಗಳನ್ನು ಸ್ಥಾಪಿಸಲು ಭೂ ಸುಧಾರಣಾ ಕಾಯ್ದೆ 109ರ ಅನ್ವಯ ಅನುಮತಿ ಹೊಂದಿದ ಭೂಮಿಗೆ ಭೀಮ್ಡ್ ಕನ್‍ವರ್ಷನ್ ಸೌಲಭ್ಯ ಒದಗಿಸಲಾಗುತ್ತಿದೆ. 5 ಮೆಗಾವ್ಯಾಟ್ ಸಾಮಥ್ರ್ಯದವರೆಗಿನ ಸೌರವಿದ್ಯುತ್ ಘಟಕಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಎನ್‍ಒಸಿ ಪಡೆಯುವುದರಿಂದ ವಿನಾಯ್ತಿ ಪಡೆಯಲಾಗಿದೆ.

2018ರ ಮಾರ್ಚ್ ಒಳಗೆ ವಿದ್ಯುತ್ ಉತ್ಪಾದನೆ ಆರಂಭಿಸುವ ಸೌರ ಘಟಕಗಳಿಗೆ 10 ವರ್ಷಗಳ ಅವಧಿವರೆಗೂ ವ್ಹಿಲಿಂಗ್‍ಮತ್ತು ಬ್ಯಾಂಕಿಂಗ್ ಚಾರ್ಜ್ಸ್ ಹಾಗೂ ಕ್ರಾಸ್ ಸಬ್ಸಿಡಿ ಚಾಜ್ರ್ಸ್‍ನಿಂದ ವಿನಾಯ್ತಿ ನೀಡಲಾಗಿದೆ.  ಕೇಂದ್ರ ಸರ್ಕಾರದಿಂದ ಗ್ರಿಡ್ ಸಂಪರ್ಕಿತ ಸೋಲಾರ್ ಯೋಜನೆಗಳ ಯಂತ್ರೋಪಕರಣಗಳಿಗೆ ಸೆಂಟ್ರಲ್ ಎಕ್ಸೈಜ್ ಮತ್ತು ಕಸ್ಟಮ್ಸ್ ಸುಂಕ ವಿನಾಯ್ತಿ ನೀಡಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin