ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಯುಎಇ ಉದ್ಯಮಿಗಳಿಗೆ ಸಿದ್ದರಾಮಯ್ಯ ಅಹ್ವಾನ

Siddaramaiaha--01

ದುಬೈ, ಮೇ 2– ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಬಂಡವಾಳ ಹೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಯುಕ್ತ ಅರಬ್ ಗಣರಾಜ್ಯದ (ಯುಎಇ) ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.   ಕರ್ನಾಟಕ ಎನ್‍ಆರ್‍ಐ ಪೋರಂ ಯು.ಎ.ಇ. ಸಮಿತಿಯನ್ನು ಉದ್ಘಾಟಿಸಲು ದುಬೈಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಯುಎಇ ಹಲವು ಉದ್ಯಮಿಗಳು, ಅನಿವಾಸಿ ಭಾರತೀಯರು ಹಾಗೂ ಅಲ್ಲಿನ ಪ್ರಭಾವಿ ಗಣ್ಯರೊಂದಿಗೆ ಸಂವಾದ ನಡೆಸಿದ ಅವರು ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಬಂಡವಾಳ ಹೂಡಲು ಮುಂದೆ ಬರುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತ ಪರಿಸರ ಇದೆ.ಬೆಂಗಳೂರು ವಿಶ್ವ ಮಾನ್ಯತೆ ಪಡೆದಿದ್ದು, ಹೊಸ ಉದ್ಯಮಕ್ಕೆ ಇಲ್ಲಿ ಅನುಕೂಲಕರ ವಾತಾವರಣ ಇದೆ. ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಎನ್‍ಆರ್‍ಐಗಳು ಮತ್ತು ಉದ್ಯಮಪತಿಗಳಿಗೆ ಅಗತ್ಯವಾದ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಅವರು ಹೇಳಿದರು.

ಅಬುಧಾಬಿಯ ಶೇಖ್ ಝಾಯೆದ್ ಗ್ರ್ಯಾಂಡ್ ಮಸೀದಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಸಿದ್ದರಾಮಯ್ಯ ತಮ್ಮ ನಿಯೋಗದೊಂದಿಗೆ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಶಾಸಕ ಮೊಯಿದ್ದೀನ್ ಬಾವಾ, ಅನಿವಾಸಿ ಭಾರತೀಯ ಉದ್ಯಮಿಗಳಾದ ಮಹಮದ್ ಅಲಿ ಉಚ್ಚಿಲ್, ಡಾ. ಬಿ.ಆರ್. ಶೆಟ್ಟಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಅತೀಖ್ ಮೊದಲಾದವರು ಮುಖ್ಯಮಂತ್ರಿಯವರ ಜೊತೆಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin