ರಾಜ್ಯದ ಇಬ್ಬರು ಸೇರಿದಂತೆ ಐವರು ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಪದಗ್ರಹಣ
ನವದೆಹಲಿ, ಫೆ. 17-ಕರ್ನಾಟಕದ ನ್ಯಾಯಮೂರ್ತಿಗಳಾದ ಮೋಹನ್ ಎಂ. ಶಾಂತನಗೌಡರ್ ಮತ್ತು ಎಸ್. ಅಬ್ದುಲ್ ನಜೀರ್ ಸೇರಿದಂತೆ ಐವರು ನ್ಯಾಯಾಧೀಶರು ಇಂದು ಸುಪ್ರೀಂಕೋರ್ಟ್ನ ಹೊಸ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಸರ್ವೋಚ್ಛ ನ್ಯಾಯಾಲಯದ ಬಲ 28ಕ್ಕೆ ಏರಿದಂತಾಗಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ನವೀನ್ ಸಿನ್ಹಾ, ಶಾಂತನಗೌಡರ್, ದೀಪಕ್ ಗುಪ್ತಾ ಮತ್ತು ಅಬ್ದುಲ್ ನಜೀರ್ ಅವರಿಗೆ ಇಂದು ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಪ್ರಮಾನ ವಚನ ಬೋಧಿಸಿದರು.
ನ್ಯಾಯಮೂರ್ತಿ ಕೌಲ್ ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರೆ, ನ್ಯಾ. ಸಿನ್ಹಾ ರಾಜಸ್ತಾನ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು
ನ್ಯಾಯಮೂರ್ತಿಗಳಾದ ಶಾಂತನಗೌಡರ್ ಮತ್ತು ಗುಪ್ರಾ ಅವರು ಅನುಕ್ರಮವಾಗಿ ಕೇರಳ ಮತ್ತು ಛತ್ತೀಸ್ಗಢ ಹೈಕೋರ್ಟ್ಗಳ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ನ್ಯಾಯಮೂರ್ತಿ ನಜೀರ್ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹೊಸ ನ್ಯಾಯಾಧೀಶರ ನೇಮಕ ಪ್ರಸ್ತಾವನೆಗೆ ಇತ್ತೀಚೆಗೆ ಸಹಿ ಹಾಕಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS