ರಾಜ್ಯದ ಹಲವಡೆ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್

ACB

ಬೆಂಗಳೂರು,ಜೂ.16-ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಎಡೆಮುರಿ ಕಟ್ಟಲು ಎಸಿಬಿ( ಭ್ರಷ್ಟಚಾರ ನಿಗ್ರಹ ದಳ)ಅಧಿಕಾರಿಗಳು ಇಂದು ರಾಜ್ಯದ ವಿವಿಧೆಡೆ ದಾಳಿ ನಡೆಸಿ ಹಲವು ಮಹತ್ವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದ ಚಿಕ್ಕಬಳ್ಳಾಪುರ, ಬೀದರ್, ಕೋಲಾರ, ಹಾವೇರಿ, ರಾಯಚೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.  ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೆಸಂದ್ರ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿರುವ ವೆಂಕಟರಮಣಪ್ಪ ಅವರ ಎರಡು ನಿವಾಸಗಳ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ದಾಳಿ ನಡೆಸಿದೆ.

ವೆಂಕಟರಮಣ್ಣಪ್ಪನವರಿಗೆ ಸೇರಿದ ಚಾಮರಾಜಪೇಟೆ, ಪ್ರಶಾಂತ್‍ನಗರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದು , ಹಣ, ಒಡವೆ ಹಾಗೂ ಹಲವು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.   ಕೋಲಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರದ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕುಮಾರಗೌಡ ಅವರ ನಿವಾಸ ಹಾಗೂ ಆತನ ಅಪ್ತ ಸ್ನೇಹಿತ ಮನೆ ಮೇಲೂ ಇಂದು ಮುಂಜಾನೆ 5.30ರಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ‘

ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದ 10 ಮಂದಿ ಸಿಬ್ಬಂದಿಯೊಂದಿಗೆ ಮುಳಬಾಗಿಲಿನ ಮುತ್ಯಾಲಪೇಟೆಯಲ್ಲಿ ನಿವಾಸ ಹಾಗೂ ಆತನ ಸಾಯಿ ನಿಹಾರಿಕಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು, ಸಂತೆಮೈದಾನದಲ್ಲಿರುವ ಕುಮಾರ್‍ಗೌಡನ ಆಪ್ತ ಸ್ನೇಹಿತನ ಮನೆಯನ್ನು ರೇಡ್ ಮಾಡಲಾಗಿದೆ.
ಎಸಿಬಿ ಡಿವೈಎಸ್ಪಿ ಪ್ರಕಾಶ್ ಗೌಡ ಪಾಟೀಲ್ ನೇತೃತ್ವದ ತಂಡ ಬೆಂಗಳೂರಿನ ಕೇಂದ್ರ ವಲಯದ ಸಾರಿಗೆ ಉಪ ಆಯುಕ್ತ ಕೆ.ಟಿ.ಹಾಲಸ್ವಾಮಿ ಅವರ ಗೃಹ, ತೋಟ ಕಚೇರಿಗಳು, ದಾವಣಗೆರೆಗೆ ಚನ್ನಗಿರಿ ತಾಲ್ಲೂಕಿನ ಗಾಣದಕಟ್ಟೆಯಲ್ಲಿರುವ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ.
ಬೀದರ್‍ನಲ್ಲಿ ಕಲಬುರಗಿ ಜೆಸ್ಕಾಂ ಎಇಇ ಮಾನಕೆರೆ ಮಾವ ಮಾಧವರಾವ್ ಅವರ ಕೆಇಬಿ ರಸ್ತೆಯಲ್ಲಿರುವ ಮನೆ ಮೇಲೆ ಎಸಿಬಿ ಅನಿತಾ ಹದ್ದಣ್ಣ ನೇತೃತ್ವದಲ್ಲಿ ದಾಳಿ ನಡೆದಿದೆ.

ಹಾವೇರಿ ಜಿಲ್ಲಾ ಸಿಂಗ್ಗಾವಿ ತಾಲ್ಲೂಕಿನ ಬಸವೇಶ್ವರನಗರದಲ್ಲಿರುವ ಆರ್‍ಐ ವಿಜಯಕುಮಾರ್ ಅವರ ನಿವಾಸಗಳ ಮೇಲೆ ದಾಳಿ ಮಾಡಿದ್ದು ಹಲವಾರು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.   ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಎಸಿಬಿಗೆ ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin