ರಾಜ್ಯಪಾಲರ ಅಂಕಿತ : ನ್ಯಾ.ವಿಶ್ವನಾಥ ಶೆಟ್ಟಿ ನೂತನ ಲೋಕಾಯುಕ್ತ

Lokayujta

ಬೆಂಗಳೂರು, ಜ.26- ಲೋಕಾಯುಕ್ತರಾಗಿ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಅಂಕಿತ ಹಾಕುವ ಮೂಲಕ ಆ ಸಂಸ್ಥೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ. ವಿಶ್ವನಾಥ ಶೆಟ್ಟಿ ಅವರು ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹೊಂದಿದ್ದಾರೆ ಎಂಬ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ಇದೆ. ಅವರ ನೇಮಕಕ್ಕೆ ಸಿಜೆ ಸಹಮತ ವ್ಯಕ್ತಪಡಿಸಿದ್ದಾರೆ.

ಉಳಿದಂತೆ ಶೆಟ್ಟಿ ಅವರು ಯಾವುದೇ ಗಂಭೀರ ಪ್ರಕರಣಗಳಲ್ಲಿ ಪಾಲ್ಗೊಂಡಿಲ್ಲ. ಕೇವಲ ಪ್ರಭಾವಿಗಳ ಪರ ವಕಾಲತ್ತು ವಹಿಸಿದ್ದಾರೆ. ಅವರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಹೀಗಾಗಿ ಅವರ ನೇಮಕಕ್ಕೆ ಸಹಿ ಹಾಕುವಂತೆ ರಾಜ್ಯ ಸರ್ಕಾರ ಗೌರ್ನರ್ ಅವರಿಗೆ ಮರು ಮನವಿ ಮಾಡಿಕೊಂಡಿತ್ತು. ಶೆಟ್ಟಿ ಅವರ ನ್ಯಾಯಾಂಗ ನಿಷ್ಟೆ ಕುರಿತಂತೆ ಸರ್ಕಾರ ನೀಡಿದ ಸಮಜಾಯಿಷಿಗೆ ಸಹಮತ ವ್ಯಕ್ತಪಡಿಸಿರುವ ರಾಜ್ಯಪಾಲರು ಲೋಕಾಯುಕ್ತರಾಗಿ ನೇಮಕ ಮಾಡುವ ಶಿಫಾರಸಿಗೆ ಇಂದು ಅಂಕಿತ ಹಾಕಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಹೀಗಾಗಿ ಭಾಸ್ಕರ್‍ರಾವ್ ತೆರವಿನ ನಂತರ ಖಾಲಿ ಉಳಿದಿದ್ದ ಲೋಕಾಯುಕ್ತ ಸ್ಥಾನಕ್ಕೆ ವಿಶ್ವನಾಥಶೆಟ್ಟಿ ನೇಮಕಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin