ರಾಜ್ಯ ಕಾಂಗ್ರೆಸ್ ಮುಖಂಡರೊಬ್ಬರ ಅಳಿಯನ ಮನೆಯಲ್ಲಿತ್ತು 9.10ಕೋಟಿ ರೂ. ಮೌಲ್ಯದ ಹಳೇ ನೋಟು..!

Black-Money--01
ಸಾಂಧರ್ಭಿಕ ಚಿತ್ರ

ಬೆಂಗಳೂರು, ಏ.2- ಅಕ್ರಮವಾಗಿ ಹಳೇ ನೋಟುಗಳನ್ನು ಸಂಗ್ರಹಿಸಿದ್ದ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರ ಅಳಿಯ ಸೇರಿದಂತೆ 14 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 9.10ಕೋಟಿ ರೂ. ಮೌಲ್ಯದ ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಕಂಟ್ರ್ಯಾಕ್ಟರ್ ಪ್ರವೀಣ್‍ಕುಮಾರ್(43), ಬೆನ್ಸನ್‍ಟೌನ್ ನಿವಾಸಿ ಎಡ್ವಿನ್ ರೋಜಾರಿಯೊ(38), ರಿಯಲ್ ಎಸ್ಟೇಟ್ ಉದ್ಯಮಿ ನಾಗರಬಾವಿಯ ಎನ್.ಉಮೇಶ್(45), ಭೂಪಸಂದ್ರದ ಅನ್‍ಬಳಗನ್ ಅಲಿಯಾಸ್ ರಾಜು(47), ತಮಿಳುನಾಡಿನ ಡೆಂಕಣಿಕೋಟೆಯ ಎಸ್.ಕಿಶೋರ್‍ಕುಮಾರ್ (30), ನಾಗರಬಾವಿ 9ನೇ ಬ್ಲಾಕ್‍ನ ಪ್ರಭು(34), ಹೆಬ್ಬಾಳ ಕೆಂಪಾಪುರದ ಮನ್‍ಮೋಹನ್(51), ಪುತ್ತೂರಿನ ನಾರಾಯಣಭಟ್(56), ಮಲ್ಲೇಶ್ವರಂನ ಪಿ.ಚಂದ್ರಶೇಖರ್ (50), ವಿಜಯ ಬ್ಯಾಂಕ್ ಕಾಲೋನಿಯ ಎಸ್.ಶ್ರೀನಿವಾಸ್(39), ಬಸವೇಶ್ವರನಗರದ ಅರುಣ್ ಎಂ.ಎ.(42), ಆರ್.ಟಿ.ನಗರದ ಮೊಹಮದ್ ಇಮ್ರಾನ್(28), ಬಾಣಸವಾಡಿಯ ಹ್ಯಾರಿಸ್ (40) ಹಾಗೂ ಮೂಡಲಪಾಳ್ಯ ಕಲ್ಯಾಣ ನಗರಿಯ ಶೇಖರ್ (37) ಬಂಧಿತರು.

ಬೆನ್ಸನ್‍ಟೌನ್‍ನಲ್ಲಿರುವ ಮನೆಯೊಂದರ ಮೇಲೆ ನಿನ್ನೆ ರಾತ್ರಿ ಸಿಸಿಬಿ ಪೆÇಲೀಸರು ದಾಳಿ ನಡೆಸಿದ್ದಾರೆ. ಹೊಸ ನೋಟಿಗೆ ಬದಲಿಸಲು ಹಳೇ ನೋಟುಗಳನ್ನು ಸಂಗ್ರಹಿಸಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.  ನೋಟುಗಳು ಅಲ್ಲದೆ ಎರಡು ಕಾರುಗಳು, ಎರಡು ಬೈಕ್‍ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ಅವರ ನಿರ್ದೇಶನ, ಡಿಸಿಪಿ ಎಚ್.ಡಿ.ಆನಂದ್‍ಕುಮಾರ್ ಅವರ ನೇತೃತ್ವದಲ್ಲಿ ಎಸಿಪಿ ಎಚ್.ಎಂ.ಮಹದೇವಪ್ಪ, ಇನ್ಸ್‍ಪೆಕ್ಟರ್‍ಗಳಾದ ಡಾ.ಸುಧಾಕರ್, ಎಂ.ಸಿ.ರವಿಕುಮಾರ್, ಬಿ.ರಾಜು, ಆರ್.ಬಾನುಪ್ರಸಾದ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ವಿಚಾರ ತಿಳಿಯುತ್ತಿದ್ದಂತೆ ವಿಧಾನಪರಿಷತ್‍ನ ಮಾಜಿ ಸದಸ್ಯರೊಬ್ಬರು ಕರೆ ಮಾಡಿ ವಿಷಯವನ್ನು ಬಹಿರಂಗ ಪಡಿಸದಂತೆ ಸಿಸಿಬಿ ಪೊಲೀಸರಿಗೆ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿದೆ.  ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಕರೆ ಮಾಡಿದ ವಿಧಾನಪರಿಷತ್‍ನ ಮಾಜಿ ಸದಸ್ಯರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin