ರಾಜ್ಯ ಸರ್ಕಾರದ ನೂತನ ಸಿಎಸ್’ಆಗಿ ಸುಭಾಷ್ ಕುಂಟಿಯಾ ಅಧಿಕಾರ ಸ್ವೀಕಾರ

Spread the love

CS

ಬೆಂಗಳೂರು, ಅ.1- ರಾಜ್ಯದ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳುವ ಜತೆಗೆ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಒತ್ತು ನೀಡುವುದಾಗಿ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿ ಸುಭಾಷ್ ಕುಂಟಿಯಾ ಹೇಳಿದ್ದಾರೆ. ನಿರ್ಗಮಿತ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಅವರಿಂದ ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ಆಡಳಿತ ಚುರುಕುಗೊಳಿಸಲು ಹೆಚ್ಚಿನ ಒತ್ತು ಕೊಡುತ್ತೇನೆ. ಅಭಿವೃದ್ಧಿ ನನ್ನ ಮೊದಲ ಗುರಿ. ತಮ್ಮ ಅಧಿಕಾರವಧಿಯಲ್ಲಿ ನಾಡಿನ ಜನರ, ಜನಪ್ರತಿನಿಧಿಗಳ ಸಹಕಾರ ನಿರೀಕ್ಷೆ ಮಾಡುವುದಾಗಿ ಅವರು ಹೇಳಿದರು.

ಆಡಳಿತದಲ್ಲಿ ಜವಾಬ್ದಾರಿ ಹೆಚ್ಚಿಸುವುದು ಮತ್ತು ಉತ್ತರದಾಯಿತ್ವದ ಭಾವನೆಯನ್ನು ಖಚಿತ ಪಡಿಸಲು ಗಮನ ಹರಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಕರುನಾಡ ಜನರಿಗೆ ನೂತನ ಮುಖ್ಯಕಾರ್ಯದರ್ಶಿ ಅವರು ದಸರಾ ಶುಭಾಶಯಗಳನ್ನು ಕೋರಿದರು. ರಾಜ್ಯದ 35ನೇ ಮುಖ್ಯಕಾರ್ಯದರ್ಶಿಯಾಗಿರುವ ಸುಭಾಷ್ ಕುಂಟಿಯಾ ಅವರ ಅಧಿಕಾರಾವಧಿ ಮುಂದಿನ ವರ್ಷದ ನವೆಂಬರ್‍ವರೆಗೆ ಇರುತ್ತದೆ. ಇದೇ ಸಂದರ್ಭದಲ್ಲಿ ಅರವಿಂದ್ ಜಾದವ್ ಅವರು ಮಾತನಾಡಿ, ಈವರೆಗೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

► Follow us on –  Facebook / Twitter  / Google+

Sri Raghav

Admin