ರಾತ್ರೋರಾತ್ರಿ ಶೇ.5ರಷ್ಟು ಟೋಲ್ ದರ ಏರಿಕೆ ಖಂಡಿಸಿ ಸಾರ್ವಜನಿಕರ ಆಕ್ರೋಶ

Navayuga-Toll--01
ದೇವನಹಳ್ಳಿ, ಏ.1- ಮಧ್ಯರಾತ್ರಿಯಿಂದಲೇ ಟೋಲ್ ದರ ಏರಿಕೆಯಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಟೋಲ್ಅನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೊದಲೇ ದುಬಾರಿ ಇದ್ದ ಟೋಲ್ ದರವನ್ನು ಮತ್ತೆ ಏರಿಕೆ ಮಾಡಿರುವುದರಿಂದ ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸರ್ವೀಸ್ ರಸ್ತೆ ಇಲ್ಲದೆ ಸ್ಥಳೀಯರು ಕಂಗಾಲಾಗಿದ್ದಾರೆ. ಕಾರು, ಲಘು ವಾಹನ ಈ ಮೊದಲು ಒಂದು ಕಡೆ 85 ಮತ್ತು ಎರಡು ಕಡೆ 125 ಇತ್ತು. ಸದ್ಯದ ದರ 90 ಮತ್ತು 130 ಆಗಿದೆ. ಎಲ್ಸಿವಿ/ಮಿನಿ ಬಸ್ ಈ ಮೊದಲು ಒಂದು ಕಡೆ 130, ಎರಡು ಕಡೆ 190, ಸದ್ಯದ ದರ ಒಂದು ಕಡೆ 195 ಮತ್ತು ಎರಡು ಕಡೆ 200. ಲಾರಿಗಳು 260, ಎರಡು ಕಡೆ 365 ಸದ್ಯದ ದರವಿದ್ದು, ಈಗ 270 ಮತ್ತು ಎರಡು ಕಡೆಯಿಂದ 405 ಕಟ್ಟಬೇಕಿದೆ.

ಭಾರೀ ವಾಹನಗಳು ಈ ಮೊದಲು ಒಂದು ಕಡೆ 390, ಎರಡು ಕಡೆ 585, ಪರಿಷ್ಕøತ ದರ 405 ಮತ್ತು ಎರಡು ಕಡೆ 610 ಆಗಿದೆ. ಭಾರೀ ವಾಹನ 7 ಆ್ಯಕ್ಸೆಲ್ ಈ ಮೊದಲು ಒಂದು ಕಡೆ 510, ಎರಡು ಕಡೆಯಿಂದ 765 ದರವಿತ್ತು. ಪ್ರಸ್ತುತ 530 ಮತ್ತು 795ರಷ್ಟು ದರ ಏರಿಕೆಯಾಗಿದೆ. ಮೊದಲೇ ಟೋಲ್ ದರ ಹೆಚ್ಚಳವೆಂದು ಇಲ್ಲಿನ ಜನ ಪ್ರತಿದಿನ ಪ್ರತಿಭಟನೆ ನಡೆಸುತ್ತಿದ್ದರು. ಈಗ ಮತ್ತೆ ಟೋಲ್ ದರ ಹೆಚ್ಚಳ ಮಾಡಿರುವುದರಿಂದ ಜನ ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ಮೇಲಾಗಿ ಇನ್ನೂ ಸ್ಥಳೀಯರಿಗೆ ಸರ್ವೀಸ್ ರಸ್ತೆ ಕೂಡ ಇಲ್ಲದಂತಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Sri Raghav

Admin