ರಾಮನವಮಿಯಂದೇ ‘ಸೀತಾ’ ಸರ ಅಪಹರಣ…!

Spread the love

chain--snatching

ಬೆಂಗಳೂರು, ಏ.7- ರಾಮನವಮಿ ದಿನದಂದು ಆಂಜನೇಯ ದೇವಾಲಯಕ್ಕೆ ತೆರಳಿದ್ದ ಸೀತಾ ಎಂಬುವರ 40 ಗ್ರಾಂ ಸರವನ್ನು ಕಳ್ಳರು ಎಗರಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವಾಪ್ತಿಯಲ್ಲಿ ನಡೆದಿದೆ. ರಾಮನವಮಿ ಅಂಗವಾಗಿ ಸೀತಾ ಎಂಬುವರು ಕೆಂಬತ್ತಳ್ಳಿಯ ಆಂಜನೇಯ ದೇವಾಲಯಕ್ಕೆ ಹೋಗಿದ್ದರು. ಪೂಜೆ ವೇಳೆ ಜನಸಂದಣಿ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಸೀತಾ ಅವರ ಕೊರಳಲ್ಲಿದ್ದ 40 ಗ್ರಾಂ ಸರವರನ್ನು ಕಳ್ಳರು ಎಗರಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin