ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಂದ ಬೆಂಬಲ..!

Ram-Mandir-01

ಲಖನೌ. ಮಾ.31 : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮೇಲೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮತ್ತೊಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಆಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಕರಸೇವಕ ಸಂಘದವರು ಬೃಹತ್ ಕಟೌಟ್ ಮತ್ತು ಬ್ಯಾನರ್‌ಗಳನ್ನು ಹಾಕಿದ್ದಾರೆ. ರಾಮಮಂದಿರ ನಿರ್ಮಾಣವನ್ನು ಬೆಂಬಲಿಸಿ ಲಖನೌ ಮತ್ತು ಪೈಜಾಬಾದ್‌ನಲ್ಲಿ 10ಕ್ಕೂ ಹೆಚ್ಚು ದೊಡ್ಡ ಕಟೌಟ್‌ ಮತ್ತು ಬ್ಯಾನರ್‌ಗಳು ಮತ್ತು 200ಕ್ಕೂ ಹೆಚ್ಚು ಹೋಲ್ಡಿಂಗ್ಸ್‌ಗಳನ್ನು ಹಾಕಲಾಗಿದೆ.

ಮುಸ್ಲಿಂ ಕರಸೇವಕ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಜಂ ಖಾನ್ ಅವರ ನೇತೃತ್ವದಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಲಖನೌದ ಜನಜಂಗುಳಿ ಪ್ರದೇಶ ಅಶೋಕ ಮಾರ್ಗದಲ್ಲಿ ರಾಮಮಂದಿರವನ್ನು ಬೆಂಬಲಿಸಿ ಹಾಕಿರುವ ಹೋಲ್ಡಿಂಗ್ಸ್‌ ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ.  ಸುಪ್ರೀಂ ಕೋರ್ಟ್‌ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಿ ಎಂದು ಸೂಚಿಸಿತ್ತು. ಇದೀಗ ಮುಸ್ಲಿಂ ಸಮುದಾಯದವರೇ ರಾಮಮಂದಿರವನ್ನು ಬೆಂಬಲಿಸಿ ಬ್ಯಾನರ್‌ಗಳನ್ನು ಹಾಕಿರುವುದು ದೇಶದ ಗಮನ ಸೆಳೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin