ರಾಯಚೂರಿನಲ್ಲಿ ಜನಿಸಿದ್ದ 4 ಕಾಲು ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ
ಬೆಂಗಳೂರು,ಫೆ.4-ವೈದ್ಯರಿಗೆ ಸವಾಲಾಗಿದ್ದ ನಾಲ್ಕು ಕಾಲಿನ ವಿಚಿತ್ರ ಮಗುವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು , ಪೋಷಕರಲ್ಲಿ ಸಂತಸ ಮನೆ ಮಾಡಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಪುಲ್ಲದಿನ್ನಿ ಗ್ರಾಮದ ಲಲಿತ, ಚನ್ನಬಸವ ದಂಪತಿಗೆ ಜ.21ರಂದು ನಾಲ್ಕು ಕಾಲಿನ ವಿಚಿತ್ರ ಮಗು ಜನಿಸಿ ಆತಂಕ ಸೃಷ್ಟಿಯಾಗಿತ್ತು. ಆತಂಕಕ್ಕೀಡಾಗಿದ್ದ ಪೋಷಕರು ಮಗುವನ್ನು ಬೆಂಗಳೂರಿನ ಹೊಸೂರು ಮುಖ್ಯರಸ್ತೆಯಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆ ವೈದ್ಯರಾದ ಜೋಸೆಫ್ ಫರ್ಸಂಗ್, ಅಕ್ರೂನ್ ಡಿಕ್ರೂಸ್ ನೇತೃತ್ವದ ತಂಡ ಇಂದು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.
ಮಗುವಿನ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ. ಸಾಮಾನ್ಯರಂತೆ ಮಗು ಬೆಳೆಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >