ರಾಯಚೂರಿನಲ್ಲಿ ನಾಲ್ಕು ಕಾಲುಗಳುಳ್ಳ ವಿಚಿತ್ರ ಮಗು ಜನನ..!

Spread the love

Baby-Raichuru

ರಾಯಚೂರು.ಜ.22 : ನಾಲ್ಕು ಕಾಲುಗಳುಳ್ಳ ವಿಚಿತ್ರ ಮಗುವೊಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಢೇಸೂಗೂರು ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದೆ. ಬಹು ಅಪರೂಪದ ಈ ಗಂಡು ಮಗು ಸದ್ಯ ಆರೋಗ್ಯವಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.  ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮದ ಲಲಿತಾ- ಚನ್ನಬಸವ ಎಂಬ ದಂಪತಿಗಳಿಗೆ ಈ ಮಗು ಜನಿಸಿದ್ದು, ಇದು ಈ ದಂಪತಿಗಳ ಎರಡನೇ ಮಗು. ಕಳೆದ ರಾತ್ರಿ ದಡೇಸ್ಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಪರಿಶ್ರಮದಿಂದ ಸಾಮಾನ್ಯ ಹೆರಿಗೆಯಲ್ಲಿ ಈ ಮಗು ಜನಿಸಿದೆ . ಲಕ್ಷ ಮಕ್ಕಳಲ್ಲಿ ಒಂದಾದ ಈ ವಿಚಿತ್ರ ಮಗುವಿನ ಬೆಳವಣಿಗೆಗೆ ವೈದ್ಯಕೀಯ ಭಾಷೆಯಲ್ಲಿ ಕಂಜೆನಿಟಲ್ ಡೆಫಾರ್ ಮೈಟಿಸ್ (Congenital deformities) ಎನ್ನಲಾಗುತ್ತದೆ.

ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದು ಮಗುವಿನ ಜೀವಕ್ಕೆ ಅಪಾಯವಿಲ್ಲ. ಶಸ್ತ್ರ ಚಿಕಿತ್ಸೆ ಮೂಲಕ ಈ ವೈಕಲ್ಯ ಸರಿಪಡಿಸಬಹುದು. ಆದರೆ ಮಗು ಬದುಕುಳಿಯುವುದು ಕಷ್ಟಸಾಧ್ಯ ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಸರಕಾರಿ ಆಸ್ಪತ್ರೆ ವೈದ್ಯ ಡಾ.ವಿರುಪಾಕ್ಷಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin