ರಾಷ್ಟ್ರಪತಿ ಚುನಾವಣೆ : ಬಿಜೆಪಿಗೆ ಎಐಎಡಿಎಂಕೆ ಅಮ್ಮ ಬಣ ಬೆಂಬಲ

Rashtrapati-Bhavan--01

ನವದೆಹಲಿ/ಚೆನ್ನೈ, ಜೂ.17- ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಬಿಜೆಪಿ ಪ್ರಾದೇಶಿಕ ಪಕ್ಷಗಳ ಮನವೊಲಿಕೆಗೆ ಯತ್ನ ನಡೆಸುತ್ತಿದ್ದು, ಆಶಾದಾಯಕ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣ ಎನ್‍ಡಿಎಗೆ ಬೆಂಬಲ ಸೂಚಿಸಿದೆ. ಅಣ್ಣಾಡಿಎಂಕೆ(ಅಮ್ಮ) ಬಣವು 38 ಸಂಸದರು ಮತ್ತು 124 ಶಾಸಕರನ್ನು ಹೊಂದಿದ್ದು, ಬಿಜೆಪಿಗೆ ಬೆಂಬಲ ಘೋಷಿಸಿದೆ.

ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಓ.ಪನ್ವೀರ್ ಸೆಲ್ವಂ ನೇತೃತ್ವದ ಬಣವೂ ಎನ್‍ಡಿಎಗೆ ಬೆಂಬಲ ಪ್ರಕಟಿಸಿದೆ. 12 ಸಂಸದರು ಮತ್ತು 11 ಶಾಸಕರು ಈ ಪಾಳಯದಲ್ಲಿದ್ದಾರೆ. ಈ ಮಧ್ಯೆ ಜೂ.20ರಂದು ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಪ್ರಕಟಿಸುವುದಾಗಿ ಎನ್‍ಡಿಎ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin