ರಾಷ್ಟ್ರಪತಿ ಚುನಾವಣೆ (Live Updates)

Meera-Vs-Kovind

ಬೆಂಗಳೂರು,ಜು.17-ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ 106ನೇ ಕೊಠಡಿಯಲ್ಲಿ ನಾಳೆ ಮತದಾನ ಆರಂಭವಾಗಿದೆ.   ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು. ಜನರಿಂದ ವಿಧಾನಸಭೆಗೆ ಚುನಾಯಿತರಾಗಿರುವ ಸದಸ್ಯರು (ಶಾಸಕರು) ಹಾಗೂ ಚುನಾವಣಾ ಆಯೋಗದಿಂದ ಅನುಮತಿ ಪಡೆದಿರುವ ರಾಜ್ಯದ ಸಂಸತ್ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ.
ಪ್ರತಿಯೊಬ್ಬ ಮತದಾರರು ಮರೆಯದೆ ಗುರುತಿನ ಚೀಟಿ ತಂದು ಮತಪತ್ರ ಪಡೆಯುವಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿದ್ದು , ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಮತಪತ್ರದಲ್ಲಿ ಯಾವ ಅಭ್ಯರ್ಥಿಗೆ ನೀವು ಮೊದಲ ಆದ್ಯತೆ ಕೊಡುತ್ತೀರಿ ಅವರ ಹೆಸರಿನ ಮುಂದೆ `1′ ಎಂದು ಸ್ಪಷ್ಟವಾಗಿ ನಮೂದಿಸಬೇಕು. ನಂತರ ನೀವು ಇಚ್ಛಿಸಿದ ಇತರ ಅಭ್ಯರ್ಥಿಗಳಿಗೆ 2, 3, 4 ಇತ್ಯಾದಿ ಗುರುತಿನ ಮೂಲಕ ಆದ್ಯತೆ ಸೂಚಿಸಬಹುದು.ಯಾವುದೇ ಕಾರಣಕ್ಕೂ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಬಾರದು. ಮತವನ್ನು ಯಾರಿಗೆ ನೀಡಿದ್ದೀರಿ ಎಂಬುದು ಗೊಂದಲಕ್ಕೆಡೆ ಮಾಡಬಾರದು. ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಒಂದೇ ಅಂಕಿ ನಮೂದಿಸಬೇಕು.

ಗುರುತು ಮಾಡಲು ನಿಗದಿಪಡಿಸಿರುವ ಒಂದೇ ಪೆನ್‍ನಿಂದ ಗುರುತು ಮಾಡಬೇಕೆ ಹೊರತು ಬೇರೆ ನಿಮ್ಮ ಸ್ವಂತ ಪೆನ್ ಬಳಸುವಂತಿಲ್ಲ. ಮತ ಪತ್ರದಲ್ಲಿ ನಿಮ್ಮ ಸಹಿ ಮಾಡುವುದಾಗಲಿ, ಹೆಬ್ಬೆಟ್ಟಿನ ಗುರುತು ಮಾಡುವುದಾಗಲಿ ಮಾಡಬಾರದು. ಒಬ್ಬ ಅಭ್ಯರ್ಥಿಗೆ ಆದ್ಯತೆಯ ಮತ `1′ ಎಂದು ಬರೆಯುವುದು ಕಡ್ಡಾಯ. ಐಚ್ಛಿಕವಾಗಿ ಇತರ ಅಭ್ಯರ್ಥಿಗಳಿಗೆ 2, 3, 4 ಇತ್ಯಾದಿ ಗುರುತು ಮಾಡುವುದು ನಿಮಗೆ ಬಿಟ್ಟಿದ್ದು.

ಪ್ರತಿಯೊಬ್ಬರೂ ಮತದಾನದ ರಹಸ್ಯವನ್ನು ಕಾಪಾಡಬೇಕು. ನೀವು ಯಾರಿಗೆ ಮತ ಹಾಕುತ್ತಿದ್ದೀರಿ ಎಂಬುದು ರಹಸ್ಯವಾಗಿರಬೇಕು. 1, 2, 3 ಇತ್ಯಾದಿ ಗುರುತು ಮಾಡುವುದರಲ್ಲಿ ಯಾವುದೇ ವ್ಯತ್ಯಾಸವಾದರೂ ನಿಮ್ಮ ಮತ ಅಸಿಂಧುವಾಗುತ್ತದೆ.


ಅಭ್ಯರ್ಥಿಗಳ ಬಗ್ಗೆ  : 71 ವರ್ಷದ ರಾಮನಾಥ ಕೋವಿಂದ ಉತ್ತಮ ನಾಯಕರೆಂಬ ವರ್ಚಸ್ಸು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದಲ್ಲಿ ಪಾಂಡಿತ್ಯ ಹೊಂದಿರುವ ಕೋವಿಂದ್, ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಇವರು, ಈ ಹಿಂದೆ ಬಿಹಾರದ ರಾಜ್ಯಪಾಲರಾಗಿದ್ದರು. ಇನ್ನು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರ ವಿಚಾರಕ್ಕೆ ಬರುವುದಾದರೆ ಬಿಹಾರದಲ್ಲಿ ಜನಿಸಿದ ಮೀರಾ ಕುಮಾರ್ (72) ಸರಳ ಹಾಗೂ ಸೌಜನ್ಯದ ವ್ಯಕ್ತಿತ್ವ ಹೊಂದಿದ್ದಾರೆ. ಉತ್ತಮ ನಾಯಕಿಯಾಗಿ ವರ್ಚಸ್ಸು ಪಡೆದಿದ್ದಾರೆ. ಲೋಕಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮೀರಾ ಕುಮಾರ್ ಅವರು ಇಂಡಿಯನ್ ಫಾರಿನ್ ಸರ್ವಿಸ್ನಲ್ಲಿ ಸೇವೆ ಸಲ್ಲಿಸಿದ್ದರಿಂದ ವಿದೇಶ ನೀತಿಗಳ ಬಗ್ಗೆ ಅರಿವು ಹೊಂದಿದ್ದಾರೆ. ದಲಿತ ನಾಯಕಿಯಾಗಿಯೂ ಮೀರಾ ಕುಮಾರ್ ಅವರು ಗುರುತಿಸಿಕೊಂಡಿದ್ದು, ಉಪಪ್ರಧಾನಿಯಾಗಿದ್ದ ಜಗಜೀವನರಾಮ್ ಅವರ ಮಗಳು ಎಂಬುದು ಮತ್ತೊಂದು ಹಿರಿಮೆ. ರಾಮವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯಂಥ ದಿಗ್ಗಜ ನಾಯಕರಿಗೆ ಮೀರಾ ಕುಮಾರ್ ಅವರು ಚುನಾವಣೆಯಲ್ಲಿ ಸೋಲಿನ ರುಚಿ ಉಣಿಸಿದ್ದಾರೆ. ಕರೋಲ್ಬಾಗ್ ಕ್ಷೇತ್ರದಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin