ರಾಷ್ಟ್ರೀಯ ಜಲನೀತಿಗೆ ಆಗ್ರಹ

Spread the love

malavalli

ಮಳವಳ್ಳಿ, ಸೆ.22- ರಾಷ್ಟ್ರೀಯ ಜಲನೀತಿ ರೂಪಿಸುವಂತೆ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಆಗ್ರಹಿಸಿದ್ದಾರೆ.  ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿ ಮಾತನಾಡಿ, 6ಸಾವಿರ ಕ್ಯೂಸೆಕ್‍ನಂತೆ 7ದಿನಗಳ ಕಾಲ ನೀರು ಹರಿಸಬೇಕು. ನಾಲ್ಕು ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಅಸ್ತಿತ್ವಕ್ಕೆ ತರಬೇಕು ಎಂದು ಸುಪ್ರೀಂತೀರ್ಪು ನೀಡಿರುವುದನ್ನು ವಿರೋಧಿಸಿದರು.ನಾಡಿನ ಭಾಷೆಗಳು ಅಲ್ಲಲ್ಲಿ ಬದಲಾಗುತ್ತದೆ. ಅದೇರೀತಿ ಜನರ ರೀತಿ ನೀತಿಯೂ ಬದಲಾಗುತ್ತಿದೆ. ಇದೇ ರೀತಿಯೂ ಕಾವೇರಿ ವಿಚಾರದಲ್ಲಿಯೂ ಬದಲಾಗಬೇಕಿತ್ತು ಎಂದರು.

ಮಳೆ ಪ್ರಮಾಣ ಕಡಿಮೆಯಾಗಿದೆ. ಪ್ರತಿ ವರ್ಷ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರಿನ ಒಳರಿವು ಪ್ರಮಾಣ ಕಡಿಮೆಯಾಗುತ್ತಿದೆ. ಆದ ಕಾರಣ ರಾಷ್ಟ್ರ, ಸಮಾಜ ಮತ್ತು ಸರ್ಕಾರ ನೀರಿನ ಬಳಕೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ತಮಿಳುನಾಡಿಗೆ 3ನೇ ಬೆಳೆಗೆ ನೀರು ಬಿಡಬೇಕೆಂಬ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಮೊದಲ ಬೆಳೆ ಮತ್ತು ಕುಡಿಯುವ ನೀರಿಗಾಗಿ ಹೋರಾಟ ನಡೆಸಬೇಕಾಗಿದೆ. ಆದರೂ ನ್ಯಾಯಾಲಯಕ್ಕೆ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ನಮ್ಮ ಸರ್ಕಾರ ವಿಫಲರಾಗಿದೆ ಎಂದು ವಿಷಾದಿಸಿದರು.
ತಾಲ್ಲೂಕು ಅಧ್ಯಕ್ಷ ಕಾರ್ತಿಕ್, ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Sri Raghav

Admin