ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ISIS ಉಗ್ರರು
ಇಸ್ತಾನ್ಬುಲ್, ನ.27-ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನಡೆಸಿದ ರಾಸಾಯನಿಕ ಅಸ್ತ್ರ ದಾಳಿಯಲ್ಲಿ ಸರ್ಕಾರದ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಸಿರಿಯಾದ 22 ಬಂಡಕೋರರು ಅಸ್ವಸ್ಥರಾಗಿದ್ದಾರೆ ಎಂದು ಟರ್ಕಿ ಸೇನೆ ತಿಳಿಸಿದೆ. ರಾಸಾಯನಿಕ ದಾಳಿಯಿಂದ 22 ಬಂಡುಕೋರ ಹೋರಾಟಗಾರ ಕಣ್ಣುಗಳು ಮತ್ತು ದೇಹದಲ್ಲಿ ಉರಿ ಕಾಣಿಸಿಕೊಂಡಿದೆ. ಐಎಸ್ ಉಗ್ರರು ರಾಸಾಯನಿಕ ಅನಿಲದ ರಾಕೆಟ್ ದಾಳಿ ನಡೆಸಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಟರ್ಕಿ ಸೇನಾಧಿಕಾರಿ ತಿಳಿಸಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download