ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಹಕಾರಿಯಾದ ‘ರೇರಾ’ ಖಾಯ್ದೆ ಬಗ್ಗೆ ತಿಳಿದುಕೊಳ್ಳಿ

RARA-01

ಪ್ರಸಕ್ತ ವರ್ಷ ಸರ್ಕಾರ ಬಹು ನಿರೀಕ್ಷಿತ, ಅಸಂಘಟಿತವಾದ ನಿರ್ಮಾಣ ವಲಯವನ್ನು ರಿಯಲ್ ಎಸ್ಟೇಟ್ ರೆಗ್ಯುಲೇಟರ್ ಅಥಾರಿಟಿ (್ಕಉ್ಕಅ) ಕಾಯ್ದೆ ಮೂಲಕ ನಿಯಂತ್ರಣ ಮಾಡಲು ಮುಂದಾಗಿದೆ.   ಈ ಕಾಯ್ದೆ ಭಾರತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಭರವಸೆ ಮೂಡಿಸಿದೆ.  RERA ಸಾಮಾನ್ಯವಾಗಿ ಗೃಹ ಖರೀದಿದಾರರ ಹಿತಾಸಕ್ತಿ ರಕ್ಷಿಸಲಿದೆ ಎಂಬ ಭರವಸೆ ಮೂಡಿಸಿದೆ. ಇದು, ವಾಸ್ತವವಾಗಿ ದೇಶದಲ್ಲಿ ಡೆವಲಪರ್‍ಗಳಿಗೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಬೆಳೆಸಲು ನೆರವಾಗಲಿದೆ.

RERA ಅದಿಂದ ಹೇಗೆ ನೆರವು:

ಸಣ್ಣ ಪ್ರಮಾಣದ ಡೆವಲಪರ್‍ಗಳು ನಿಯಂತ್ರಣ ಅಧಿಕಾರಿಗಳು, ಗೃಹ ಖರೀದಿದಾರರ ಹದ್ದುಗಣ್ಣಿನ ಪರಿಶೀಲನೆಯಿಂದ ಬಚಾವಾಗಲು ಕಷ್ಟ ಪಡಬೇಕಾಗಿದೆ. ಉದ್ಯಮದಲ್ಲಿ ಜಂಟಿ ಸಹಭಾಗಿತ್ವದ ಯೋಜನೆಗಳು, ವಿಲೀನ, ಸ್ವಾಧೀನ ಪ್ರಕ್ರಿಯೆಗಳು ಹೆಚ್ಚಲಿವೆ. ಕಂಪೆನಿಗಳ ಮೇಲಿನ ಹಣಕಸು ಒತ್ತಡವನ್ನು ಕುಗ್ಗಿಸುವುದೇ ಕಾಯ್ದೆಯ ಉದ್ದೇಶ. ಈ ಮೂಲಕ ಇದನ್ನು ಸಂಘಟಿತ ವಲಯವಾಗಿ ಅಭಿವೃದ್ಧಿಪಡಿಸಲಾಗುತ್ತದೆ.   ್ಕಉ್ಕಅ ವಸತಿ ವಲಯದಲ್ಲಿ ಮಾರಾಟದ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಾಮಥ್ರ್ಯ ನೀಡಲಿದೆ. ಪ್ರಸ್ತುತ, ಡೆವಲಪರ್‍ಗಳು ಯೋಜನೆಯ ಆರಂಭಕ್ಕೂ ಮುನ್ನ ಖರೀದಿದಾರರು ಪಾವತಿಸುವ ಹಣದ ಮೇಲೆ ಅವಲಂಬಿತರಾಗಿದ್ದಾರೆ. ಅತ್ಯುತ್ತಮ ಕಾಯ್ದೆಯು ಈ ವಿಷಯದಲ್ಲಿ ಪಾರದರ್ಶಕತೆ ತರಲಿದ್ದು, ಸಕಾಲದಲ್ಲಿ ಉದ್ದೇಶಿತ ನಿರ್ಮಾಣ ಪೂರ್ಣಗೊಳ್ಳಲು ಒತ್ತು ನೀಡಲಿದೆ. ಅಲ್ಲದೆ ಇತರೆ ಯೋಜನೆಗಳಿಗೆ ಹಣ ಬಳಕೆ ಮಾಡುವುದರ ಮೇಲೆ ಮಿತಿಯನ್ನು ಹೇರಲಿದೆ.

ದೇಶಾದ್ಯಂತ ಇರುವ ಡೆವಲಪರ್‍ಗಳು ಈಗ ಖರೀದಿದಾರರಿಂದ ಪಡೆಯುವ ಮೊತ್ತದಲ್ಲಿ ಶೇ.70ರಷ್ಟನ್ನು ಪ್ರತ್ಯೇಕ ಕಾಯ್ದೆಯಲ್ಲಿ ಇಡಬೇಕಿದ್ದು, ನಿರ್ದಿಷ್ಟ ಉದ್ದೇಶಕ್ಕಾಗಿಯೇ ಬಳಸಬೇಕಾಗಿದೆ. ಈ ಕ್ರಮವು ಡೆವಲಪರ್‍ಗಳಿಗೆ ಲಿಕ್ವಿಡಿಟಿ ಹೆಚ್ಚಿಸಲಿದ್ದು, ಆರ್ಥಿಕವಾಗಿ ಪಾರದರ್ಶಕತೆ ಉಂಟಾಗಲಿದೆ. ಪಿಇ ಫಂಡ್ ಅಂತಿಮ ಬಳಕೆದಾರರ ಆಸಕ್ತಿಯನ್ನು ಉತ್ತಮಪಡಿಸಲಿದೆ.  ಮುಂಬರುವ ವರ್ಷಗಳಲ್ಲಿ ಈ ಉದ್ದೇಶಿತ ್ಕಉ್ಕಅ ಕಾಯ್ದೆ ಹೇಗೆ ರಿಯಲ್ ಎಸ್ಟೇಟ್ ಉದ್ಯಮವನ್ನು ಪರಿವರ್ತನೆಗೊಳಿಸಲಿದೆ ಎಂಬ ಕುರಿತು ಕುತೂಹಲ ಕೆರಳಿಸಿದೆ. ಆದರೆ ಇದರ ಜಾರಿ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯುವುದು ಸರಳವಾಗಬೇಕಾಗಿದೆ. ಏಕಗವಾಕ್ಷಿ ವ್ಯವಸ್ಥೆ ಜಾರಿಯಿಂದ ಸ್ಥಳೀಯ ಹಂತದಲ್ಲಿ ಉದ್ಯಮದ ಪ್ರಗತಿಗೆ ಹೆಚ್ಚಿನ ಒತ್ತು ನೀಡಬಹುದು.

ಗೃಹ ಖರೀದಿದಾರರಿಗೆ ಏನು ಅನುಕೂಲ:

ಅರ್ಹ ಖರೀದಿದಾರರ ದೃಷ್ಟಿಯಿಂದ ಇಡೀ ಪ್ರಕ್ರಿಯೆ ಹೂಡಿಕೆ ಸ್ನೇಹಿಯಾಗಲಿದೆ. ಮುಂದಿನ ಪೀಳಿಗೆಯು ಆಸ್ತಿ ರೂಪಿಸಲು ಸಹಕಾರಿಯಾಗಲಿದೆ.
ನಿರ್ಮಾಣಗಾರರು ಯೋಜನೆ ಜಾರಿಗೆ ವಿಫಲರಾದರೆ ಖರೀದಿದಾರರು ಗ್ರಾಹಕ ವೇದಿಕೆ, ಸಿವಿಲ್ ನ್ಯಾಯಾಲಯದ ಮೊರೆ ಹೊಗಬಹುದು. ರೆರಾ ಕಾಯ್ದೆಯು ಇಂಥ ಪ್ರಕರಣಗಳ ನಿಭಾಯಿಸಲು ಕೇಂದ್ರ ಸಲಹಾ ಮಂಡಳಿ ಸ್ಥಾಪನೆಗೆ ಅವಕಾಶ ನೀಡಲಿದೆ. ಸಕ್ಷಮ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ರಿಜಿಸ್ಟ್ರೇಷನ್ ಅಥಾರಿಟಿ (್ಕಉ್ಕಅ) ಅಡಿ ಎಲ್ಲ ಯೋಜನೆಗಳು ನೋಂದಣಿ ಆಗಲಿವೆ.ಈ ಮೊದಲೇ ಉಲ್ಲೇಖಿಸಿದಂತೆ, ಖರೀದಿದಾರರು ಪ್ರತ್ಯೇಕ ಖಾತೆಯಲ್ಲಿ ಇರಿಸುವ ಶೇ.70ರಷ್ಟು ಹಣವನ್ನು ಉದ್ದೇಶಿತ ಯೋಜನೆಗೆ ಬಿಟ್ಟು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶವಿಲ್ಲ. ಜತೆಗೆ ನಿರ್ಮಾಣಗಾರ ತಾನು ಸೂಚಿಸಿದ ಗಡುವಿನೊಳಗೆ ಯೋಜನೆ ಪೂರ್ಣಗೊಳಿಸಿ ಕೊಡಬೇಕು.

ವಿದೇಶಿ ಹೂಡಿಕೆಗಳು:

ವಿದೇಶಿ ಹೂಡಿಕೆಗಳು, ಡೆವಲಪರ್‍ಗಳು ಈಗ ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಜಾಗತಿಕ ಹೂಡಿಕೆದಾರರು ಆಯ್ದ ಭಾರತೀಯ ರಿಯಲ್ ಎಸ್ಟೇಟ್ ಮಾರ್ಕೆಟ್‍ನಲ್ಲಿ ಹೂಡಿಕೆ ಮಾಡಲಿದ್ದಾರೆ. ಇದು, ಕಾಯ್ದೆ ಜಾರಿ ನಂತರ ಹೆಚ್ಚಿನ ಹೂಡಿಕೆಯನ್ನು ಸೆಳೆಯಲಿದೆ. ಈ ಮಸೂದೆಯಿಂದ ಗ್ರಾಹಕರ ಹಿತಾಸಕ್ತಿ ಕಾಪಾಡುವ ಜೊತೆಗೆ ವಂಚನೆಯಿಂದ ಮುಕ್ತಗೊಳಿಸಲಿದೆ. ಇದರಿಂದಾಗಿ ಅನಿವಾಸಿ ಭಾರತೀಯರಲ್ಲೂ ಹೂಡಿಕೆಯ ವಿಶ್ವಾಸ ಮೂಡಿಸಲಿದೆ.

ರಿಯಲ್ ಎಸ್ಟೇಟ್ ಉದ್ಯಮವು ಸಂಪೂರ್ಣವಾಗಿ ಯೋಜನೆಗಳ ಜಾರಿಯ ಮೇಲೆ ಅವಲಂಬಿತವಾಗಿದ್ದು , ಈ ಕಾಯ್ದೆಯು ಜಾರಿಗೆ ಬಂದರೂ, ನಾವೆಲ್ಲರೂ ಸಂಬಂಧಿತ ನ್ಯಾಯಾಂಗ ಅಧಿಕಾರಿಗಳ ಜತೆಗೆ ನಿಯಂತ್ರಣ ಪ್ರಾಧಿಕಾರಗಳ ಸ್ಥಾಪನೆ, ಸಕ್ಷಮ ಪ್ರಾಧಿಕಾರದ ರಚನೆಯನ್ನು ಸುಗಮ ವಹಿವಾಟಿಗಾಗಿ ನಿರೀಕ್ಷೆ ಮಾಡಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin