ರಿಲಯನ್ಸ್ ಜಿಯೋ ಸಿಮ್ ಗೆ ಅರ್ಜಿ ಹಾಕಿದ ಪ್ರಿಯಾಂಕಾ ಚೋಪ್ರಾ..!

Spread the love

pRIYANKA

ಮುಂಬೈ. ಸೆ. 06 : ಟೆಲಿಕಾಂ ವಲಯದಲ್ಲಿ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ ಅರ್ಜಿ ಸಲ್ಲಿಸಿದ್ದಾರಂತೆ…!?
ಹೌದು, ಖ್ಯಾತ ಹಾಲಿವುಡ್, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜಿಯೋ ಸಿಮ್ ಪಡೆಯಲು ಹಾಕಿರುವ ಅರ್ಜಿಯ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಓಡಾಡುತ್ತಿದೆ. ಆದರೆ ಈ ಅರ್ಜಿ ನಿಜಕ್ಕೂ ಪ್ರಿಯಾಂಕಾ ಸಲ್ಲಿಸಿರುವುದೇ..? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಮೆರಿಕಾದಲ್ಲಿ ಶೂಟಿಂಗ್ ನಲ್ಲಿರುವ ಪ್ರಿಯಾಂಕಾ ಚೋಪ್ರಾ ನಿಜವಾಗಿಯೂ ಜಿಯೋ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದಾರಾ? ಎಂಬುದನ್ನು ಪರಿಶೀಲಿಸದೆ ಜನರು ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡುತ್ತಿದ್ದಾರೆ. ಅರ್ಜಿಯಲ್ಲಿ ಪ್ರಿಯಾಂಕಾ ಚೋಪ್ರಾರ ಪಾಸ್ ಪೋರ್ಟ್ ಫೋಟೋ ಹಾಗೂ ಸಹಿ ಹಾಗೂ ಇನ್ನಿತರ ವಿವರಗಳು ಅರ್ಜಿಯಲ್ಲಿ ನಮೂದಿಸಲಾಗಿದೆ.

ರಿಲಯನ್ಸ್ ನ ಮೊಬೈಲ್ ಟೆಲಿಕಾಂ ಸೇವೆ ಹಾಗೂ ಜಿಯೋ 4ಜಿ ಸೇವೆಗಳನ್ನು ಗಣೇಶ ಚತುರ್ಥಿ ದಿನದಂದು ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಕೇಶ್ ಅಂಬಾನಿ ಚಾಲನೆ ನೀಡಿದರು. ರಿಲಯನ್ಸ್ ಸೇವೆ ಆರಂಭಗೊಂಡ ಹಿನ್ನೆಲೆ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ನೀತು ಅಂಬಾನಿ ಹಾಗೂ ಮುಕೇಶ್ ಅಂಬಾನಿಗೆ ಶುಭಾಶಯ ಕೋರಿದ್ದರು. ಸಾಮಾಜಿಕ ಜಾಲತಾಣದಲ್ಲಿ ಚೋಪ್ರಾರ ಅರ್ಜಿ ವೈರಲ್ ಆಗುತ್ತಿದ್ದರು ಈ ಕುರಿತು ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ಹಾಗೂ ಸ್ಪಷ್ಠಿಕರಣ ನೀಡಿಲ್ಲ.

 Follow us on –  Facebook / Twitter  / Google+

Sri Raghav

Admin