ರುದ್ರೇಶ್ ಕೊಲೆ ಹಿಂದೆ ಪ್ರತಿಷ್ಠಿತರ ಕೈವಾಡದ ಶಂಕೆ

Rudresh-02

ಬೆಂಗಳೂರು,ನ.4-ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಹಿನ್ನೆಲೆಯಲ್ಲಿ ಇನ್ನೂ ಕಾಣದ ಪ್ರತಿಷ್ಠಿತರ ಕೈಗಳಿವೆ ಎಂಬ ಶಂಕೆ ಪೂರ್ವ ವಿಭಾಗದ ಪೊಲೀಸರಲ್ಲಿ ವ್ಯಕ್ತವಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ) ನಗರ ಘಟಕದ ಅಧ್ಯಕ್ಷ ಆಸೀಮ್ ಶರೀಫ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ ನಂತರ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಶಂಕೆ ವ್ಯಕ್ತವಾಗಿದೆ.  ರುದ್ರೇಶ್ ಕೊಲೆಯ ಮಾಸ್ಟರ್ ಮೈಂಡ್ ಯಾರು, ಇದರ ಹಿಂದಿನ ಕಾಣದ ಪ್ರತಿಷ್ಠಿತ ಕೈಗಳು ಯಾವುವು ಎಂಬುದರ ಬಗ್ಗೆ ಪೂರ್ವ ವಿಭಾಗದ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ.

ಬಂಧಿತನಾಗಿರುವ ಆಸೀಮ್ ಶರೀಫ್‍ನನ್ನು ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದು , ಈ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು ಎಂಬ ಹಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.  ಅ.16ರಂದು ಬೆಳಗ್ಗೆ ಆರ್‍ಎಸ್‍ಎಸ್ ಪಥಸಂಚಲನ ಮುಗಿಸಿ ಬಂದು ಹೋಟೆಲ್‍ವೊಂದರ ಬಳಿ ಟೀ ಕುಡಿಯುತ್ತಿದ್ದ ರುದ್ರೇಶ್ ಅವರನ್ನು ಆರೋಪಿಗಳು ಪಕ್ಕಾ ಪ್ಲಾನ್ ಮಾಡಿ ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.  ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗುತ್ತಿದ್ದಂತೆ ಆಸೀಂ ಶರೀಫ್ ಜೆಸಿನಗರದ ಎಸ್.ಕೆ.ಗಾರ್ಡನ್‍ನಲ್ಲಿರುವ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದರು. ಬಂಧಿತರು ನೀಡಿದ ಹೇಳಿಕೆ ಮೇರೆಗೆ ಆಸೀಂ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಕಡೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು , ಗೌಪ್ಯ ಸ್ಥಳದಲ್ಲಿಟ್ಟು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin