ರೂಪದರ್ಶಿಯ ಕಣ್ಣುಗಳನ್ನು ಕಿತ್ತು, 140 ಬಾರಿ ಇರಿದು ಕೊಂದ ಸಹೋದರಿ..!

Spread the love

Model-Killed

ಸೇಂಟ್ ಪೀಟರ್ಸ್‍ಬರ್ಗ್, ಏ.6-ರೂಪದರ್ಶಿಯೊಬ್ಬಳ ಕಣ್ಣುಗಳನ್ನು ಕಿತ್ತು, ಕಿವಿಗಳನ್ನು ಕತ್ತರಿಸಿ, 140 ಬಾರಿ ಇರಿದು ಕೊಂದಿರುವ ಭೀಭತ್ಸ ಘಟನೆ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‍ನಲ್ಲಿ ನಡೆದಿದೆ. ಈ ಘನಘೋರ ಕೃತ್ಯವನ್ನು ಆಕೆಯ ಸಹೋದರಿಯೇ (ಅಕ್ಕ) ಎಸಗಿದ್ದಾಳೆ. ಮತ್ಸರವೇ ಈ ಕುಕುತ್ಯಕ್ಕೆ ಕಾರಣ.
ಸೇಂಟ್ ಪೀಟರ್ಸ್‍ಬರ್ಗ್‍ನ ಸ್ಟೇಫಾನಿಯಾ ಡುಬ್ರೋವಿನಾ (17) ಕಗ್ಗೊಲೆಯಾದ ರೂಪದರ್ಶಿ. ಜಾಹೀರಾತು ಮತ್ತು ಮಾಡೆಲಿಂಗ್ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಈಕೆಯ ಸಾಧನೆಯನ್ನು ಸಹಿಸದೇ ಆಕ್ಕ ಎಲಿಜಾವಿಟಾ ಈ ಭಯಾನಕ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೇಫಾನಿಯಾ ಮತ್ತು ಎಲಿಜಾವಿಟಾ ಅವಳಿ ಸಹೋದರಿಯರು. ತಂಗಿ ರೂಪದರ್ಶಿಯಾಗಿ ಮಿಂಚುತ್ತಿದ್ದಳು. ಈ ವಿಷಯದಲ್ಲಿ ಇವರಿಬ್ಬರಿಗೂ ಆಗಾಗ ಜಗಳವಾಗುತ್ತಿತ್ತು.   ಅಪರಿಚಿತ ವ್ಯಕ್ತಿಯೊಬ್ಬನ ಫ್ಪಾಟೊಂದರಲ್ಲಿ ಸ್ಟೇಫಾನಿಯಾ ಶವ ಪತ್ತೆಯಾಗಿದೆ. ಆಕೆಯ ಕಣ್ಣುಗಳನ್ನು ಕೀಳಲಾಗಿದೆ. ಕಿವಿಗಳನ್ನು ಕತ್ತರಿಸಲಾಗಿದೆ. ದೇಹದ ಎಲ್ಲ ಭಾಗಗಳಲ್ಲೂ 140ಕ್ಕೂ ಹೆಚ್ಚು ಬಾರಿ ಆಳವಾದ ಇರಿತದ ಗಾಯಗಳಾಗಿವೆ.

ಈ ಪ್ಲಾಟ್‍ನಲ್ಲಿ ಅವಳಿ ಸಹೋದರಿಯರೊಂದಿಗೆ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ಮದ್ಯ ತರಲು ಹೊರಹೋಗಿದ್ದಾಗ, ಅಕ್ಕ-ತಂಗಿಯರ ನಡುವೆ ಜಗಳ ಉಲ್ಬಣಗೊಂಡು ಈ ಭೀಕರ ಹತ್ಯೆಯಲ್ಲಿ ಪರ್ಯಾವಸನಗೊಂಡಿದೆ.   ಈಕೆ ಬಹು ಆಕರ್ಷಕ ಹುಡುಗಿಯಾಗಿದ್ದಳು. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಳು. ನನ್ನೊಂದಿಗೆ ಅನೇಕ ಶೋಗಳಲ್ಲೂ ಭಾಗವಹಿಸಿದ್ದಳು. ಈ ಕೃತ್ಯದಿಂದ ನನಗೆ ದಿಗ್ಭ್ರಮೆಯಾಗಿದೆ ಎಂದು ಸೇಂಟ್ ಪೀಟರ್ಸ್‍ಬರ್ಗ್‍ನ ಶೋಮ್ಯಾನ್ ಸ್ಟಾಸ್ ಬರೆಟ್‍ಸ್ಕಿ ಹೇಳಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Model--01

Model--02

Sri Raghav

Admin