ರೂರಲ್ ಕಾಲೇಜಿಗೆ ರಾಷ್ಟ್ರೀಯ ಗೋಲ್ಡ್‍ಜೋನ್ ಪ್ರಶಸ್ತಿ

Spread the love

kanakapura--rural--collegeಕನಕಪುರ, ಸೆ.23- ವಿಕಲಚೇತನ ಮತ್ತು ಅಂಧರ ಶ್ರೇಯೋಭಿವೃದ್ಧಿಗೆ ನಿಧಿಸಂಗ್ರಹದಲ್ಲಿ ಪ್ರಮುಖ ಪಾತ್ರವಹಿಸಿ ಸೇವಾ ಮನೋಭಾವನೆಯನ್ನು ತೋರಿದ ಪಟ್ಟಣದ ಗ್ರಾಮಾಂತರ ವಿದ್ಯಾಪ್ರಚಾರ ಸಂಘದ ರೂರಲ್ ಕಾಲೇಜಿಗೆ ರಾಷ್ಟ್ರೀಯ ಅಂಧರ ಸೇವಾಕೇಂದ್ರ ಗೋಲ್ಡ್‍ಜೋನ್ ಪ್ರಶಸ್ತಿ ಪುರಸ್ಕಾರ ಲಭಿಸಿದೆ.ರಾಷ್ಟ್ರೀಯ ಅಂಧರ ಸೇವಾಕೇಂದ್ರ ನೀಡಿದ ಪ್ರಶಸ್ತಿಯನ್ನು ಪ್ರಾಂಶುಪಾಲ ಡಾ.ಮೇಜರ್ ಮುನಿರಾಜಪ್ಪನವರ ಸಮ್ಮುಖದಲ್ಲಿ ಕಾಲೇಜು ವಿದ್ಯಾರ್ಥಿಗಳು ಸ್ವೀಕರಿಸಿದರು. ನಂತರ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಂಧರ ಸೇವಾ ಕಚೇರಿಯಿಂದ ನಮ್ಮ ಕಾಲೇಜಿಗೆ ಗೋಲ್ಡ್‍ಜೋನ್ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತಸವಾಗಿದೆ ಎಂದರು.
ಪ್ರಸಕ್ತ ವರ್ಷದಲ್ಲಿ ಅಂಧರಿಗೆ ಸಹಾಯಹಸ್ತದ ನಿಧಿಸಂಗ್ರಹ ಕಾರ್ಯಕ್ರದಲ್ಲಿ ರೂರಲ್ ಕಾಲೇಜು ವಿದ್ಯಾರ್ಥಿಗಳ ಸೇವಾಮನೋಭಾವವನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರ ಮಾಡಿರುವುದು ನಮ್ಮ ಕಾಲೇಜಿನ ಸೇವೆಯನ್ನು ಹಿಮ್ಮಡಿಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.
ಉಪನ್ಯಾಸಕರಾದ ಲಕ್ಷ್ಮೀನಾರಾಯಣ್, ಪುಟ್ಟಸ್ವಾಮಿ, ರಾಜಣ್ಣ, ಕಣೇಕಳನಿರಂಜನಸ್ವಾಮಿ, ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin