ರೇಪಿಸ್ಟ್ ರಾಮ್‍ ರಹೀಂಗೆ ಇಂದು ಜೈಲಲ್ಲೇ ಶಿಕ್ಷೆ ಪ್ರಮಾಣ ಪ್ರಕಟ (Live)

Spread the love

Ram-Raheem-Singh--01

ಚಂಢೀಗಡ, ಆ.28-ಹದಿನೈದು ವರ್ಷಗಳ ಹಿಂದೆ ಇಬ್ಬರು ಸಾಧ್ವಿಯವರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಪರಾಧಿ ಎಂದು ಘೋಷಿತನಾದ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಬಾಬಾ ಗುರ್‍ಮೀತ್ ರಾಮ್‍ರಹೀಂ ಸಿಂಗ್‍ನ ಶಿಕ್ಷೆಯ ಪ್ರಮಾಣ ಇಂದು ರೋಹ್ಟಕ್ ಜಿಲ್ಲಾ ಜೈಲಿನಲ್ಲಿ ತೀರ್ಮಾನವಾಗಲಿದೆ. ಆತ ಎಸಗಿರುವ ಅಪರಾಧಕ್ಕಾಗಿ ಏಳು ವರ್ಷಗಳ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.  ಸಿಂಗ್‍ನನ್ನು ಅಪರಾಧಿ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ರೋಹ್ಟಕ್ ಜಿಲ್ಲಾ ಜೈಲಿಗೆ ಆಗಮಿಸಿ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಘೋಷಿಸಲಿದ್ದಾರೆ.

ಪಂಚಕುಲಾದಲ್ಲಿ ಅಪರಾಧಿ ಎಂದು ಘೋಷಿತನಾಗಿದ್ದ ಬಾಬಾನನ್ನು ಶುಕ್ರವಾರವೇ ರೋಹ್ಡಕ್ ಜೈಲಿಗೆ ತರಲಾಗಿತ್ತು. ಆತನನ್ನು ಮತ್ತೆ ಪಂಚಕುಲಾ ನ್ಯಾಯಾಲಯಕ್ಕೆ ಕರೆ ತಂದರೆ ಮತ್ತಷ್ಟು ಹಿಂಸೆ ಭುಗಿಲೇಳಬಹುದು ಎಂಬ ಕಾರಣಕ್ಕಾಗಿ ನ್ಯಾಯಾಧೀಶರೇ ಜಿಲ್ಲಾ ಜೈಲಿಗೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಂತೆ ಪಂಬಾಜ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದೆ. ಬಾಬಾನ ಶಿಕ್ಷೆ ಪ್ರಮಾಣ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಹರ್ಯಾಣದಲ್ಲಿ ಮೊಬೈಲ್ ಇಂಟರ್ ನೆಟ್, ಎಸ್ ಎಂಎಸ್ ಸೇವೆ ಸ್ಥಗಿತ :

ಬಾಬಾ ರಾಮ್ ರಹೀಂ ಸಿಂಗ್ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನಲೆಯಲ್ಲಿ ಹರ್ಯಾಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೊಬೈಲ್ ಇಂಟರ್ ನೆಟ್. ಎಸ್ ಎಂಎಸ್ ಸೇವೆ ಸೇರಿದಂತೆ ಡಾಂಗಲ್ ನ ಎಲ್ಲ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸ್ವತಃ ಹರ್ಯಾಣ ಸರ್ಕಾರದ ಗೃಹ ಇಲಾಖೆಯೇ ಈ ಬಗ್ಗೆ ಆದೇಶ ನೀಡಿದ್ದು, ಹರ್ಯಾಣ ರಾಜ್ಯದಲ್ಲಿ ಎಲ್ಲ ಬಗೆಯ ಸಂದೇಶ ರವಾನೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಅದರಂತೆ ವಾಟ್ಸಪ್ ನಂತಹ ಎಲ್ಲ ಬಗೆಯ ಸಂದೇಶ ರವಾನೆ ವ್ಯವಸ್ಥೆಯನ್ನು ಆಗಸ್ಚ್ 29ರ ವರೆಗೂ ರದ್ದುಗೊಳಿಸಲಾಗಿದೆ. ಅಂತೆಯೇ ರೋಹ್ಟಕ್ ಹಾಗೂ ಡೇರಾ ಸಚ್ಚಾ ಆಶ್ರಮ ಸೇರಿದಂತೆ ಸಿರ್ಸಾದಾದ್ಯಂತ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ಪಂಚಕುಲ, ಸಿರ್ಸಾ ಮತ್ತು ರೋಹ್ಟಕ್ ನಲ್ಲಿನ ಎಲ್ಲ ಶಾಲಾ-ಕಾಲೇಜು ಹಾಗೂ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Facebook Comments

Sri Raghav

Admin