ರೈತರಿಗೆ ಸಮರ್ಪಕ ಬೆಳೆಹಾನಿ ಪರಿಹಾರ : ವಿತರಣೆಗೆ ಆಗ್ರಹ

belagam-4
ಗದಗ,ಸೆ.27- ಮುಂಗಾರು ಹಾಗೂ ಹಿಂಗಾರಿ ಮಳೆಯ ಕೊರತೆಯಿಂದ ರಾಜ್ಯದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅವರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಜೊತೆಗೆ ರೈತರಿಗೆ ಬೆಳೆಹಾನಿ ಪರಿಹಾರ ವಿತರಿಸಬೇಕು ಎಂದು ಗದಗ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಣ್ಣ ಸಂಶಿ ಒತ್ತಾಯಿಸಿದರು.ನಗರದಲ್ಲಿ ಮುಖಂಡ ಹಾಗೂ ನಿವೃತ್ತ ಪ್ರಾಚಾರ್ಯ ಪ್ರೊ . ವೆಂಕಟೇಶ ಕಟ್ಟಿಮನಿ ನಿವಾಸದ ಆವರಣದಲ್ಲಿ ಜರುಗಿದ ತಾಲೂಕು ಜೆಡಿಎಸ್ ಮುಖಂಡರು-ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಸರಕಾರದ ಮೂಲಭೂತ ಸೌಲ್ಯಗಳಿಂದ ವಂಚಿತರಾಗಿದ್ದು, ಅಲ್ಪಸ್ವಲ್ಪ ಮಳೆಯ ನೆರವಿನಿಂದ ಬೆಳೆದ ಈರುಳ್ಳಿ ಸೇರಿದಂತೆ ಇತರೇ ಬೆಳೆಗಳಿಗೆ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ. ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕೆಂದು ಅವರು ಆಗ್ರಹಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಸುಭಾಷಚಂದ್ರ ದಾನರಡ್ಡಿ ಮಾತನಾಡಿ, ರಾಜ್ಯ ಸರಕಾರವು ಕಾವೇರಿ ನದಿ ನೀರಿನ ವಿಷಯದಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದ ರೀತಿಯಲ್ಲಿಯೇ ಉತ್ತರ ಕರ್ನಾಟಕ ರೈತರ ಜೀವನಾಡಿಯಾದ ಮಹದಾಯಿ, ಕಳಸಾಬಂಡೂರಿ ಯೋಜನೆ ವಿಷಯದಲ್ಲೂ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.  ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪ್ರೊ ರ. ವೆಂಕಟೇಶ ಕಟ್ಟಿಮನಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳಾದ ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ರಕ್ಷಣೆ, ರಾಜ್ಯದ ರೈತರ ಜೀವನಾಡಿಯಾಗಿರುವ ಮಹದಾಯಿ ನದಿ ನೀರನ್ನು ಪಡೆಯುವ ಮೂಲ ಉದ್ಧೇಶ ಪಕ್ಷದ ಕಾರ್ಯರ್ತರದ್ದಾಗಿದೆ ಎಂದರು.ಜೆಡಿಎಸ್ ಪಕ್ಷವನ್ನು ಶಹರ, ಪಟ್ಟಣ, ನಗರ ಪ್ರದೇಶಗಳೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ತಳಮಟ್ಟದಿಂದ ಕಾರ್ಯರ್ತರ ಮೂಲಕ ಗಟ್ಟಿಗೊಳಿಸುವ ಕೆಲಸವಾಗಬೇಕಿದೆ ಎಂದು ಪ್ರೊ ರ.ವೆಂಕಟೇಶ ಕಟ್ಟಿಮನಿ ಹೇಳಿದರು.

ಸಭೈಯಲ್ಲಿ ಜಿ.ಬಿ. ಬಡಿಗೇರ, ಸುರೇಶ ಮುಳಗುಂದ, ಮೈಲಾರಪ್ಪ, ಬಸವರಾಜ ಕೊಪ್ಪದ,ಸುರೇಶ ಕಿರೇಸೂರ, ಸಂಗಪ್ಪ ಭಾಗಾಪೂರ, ಮಲ್ಲಿಕಾರ್ಜುನ ಹುಬ್ಬಳ್ಳಿ, ಭೀಮಪ್ಪ ಲಮಾಣಿ, ದೇವಪ್ಪ ಲಮಾಣಿ, ಸುರೇಶ ಲಮಾಣಿ, ದೇವರಾಜ ಸೇರಿದಂತೆ ನೂರಾರು ಜನ ಮುಖಂಡರು, ಗ್ರಾಮೀಣ ಭಾಗದ ಕಾರ್ಯಕರ್ತರು ಉಪಸ್ಥಿತರಿದ್ದರು. ಜೆಡಿಎಸ್ ಜಿಲ್ಲಾ ಯುವ ಕಾರ್ಯದರ್ಶಿ ಮಂಜುನಾಥ ಪರ್ವತಗೌಡ್ರ, ಸ್ವಾಗತಿಸಿದರು. ರೈತ ಘಟಕದ ಅಧ್ಯಕ್ಷ ವೀರೇಶಗೌಡ ಪಾಟೀಲ ವಂದಿಸಿದರು.

 

► Follow us on –  Facebook / Twitter  / Google+

Sri Raghav

Admin