ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ..!

Former-Suicide-e01

ನವದೆಹಲಿ, ಡಿ.6-ಕೈಕೊಟ್ಟ ಮಳೆ, ಬೆಳೆ ನಷ್ಟ, ಸಾಲಬಾಧೆ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಗಳ ಪೈಕಿ ಕರ್ನಾಟಕ 3ನೆ ಸ್ಥಾನ ಪಡೆದಿದೆ. 2014-15ರಲ್ಲಿ ಕರ್ನಾಟಕದಲ್ಲಿ 1197 ಮಂದಿ ಅನ್ನದಾತರು ಸಾವಿಗೆ ಶರಣಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಮಹಾರಾಷ್ಟ್ರ 3030 ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ 1358 ಎರಡನೆ ಸ್ಥಾನ, ಚತ್ತೀಸ್‍ಗಡ 854, ಮಧ್ಯಪ್ರದೇಶ 581 ಹಾಗೂ ಆಂಧ್ರಪ್ರದೇಶ 516 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬರಗಾಲದಿಂದ ಅನ್ನದಾತ ಆತ್ಮಹತ್ಯೆಗೆ ಕೊರಳು ಒಡುತ್ತಿದ್ದೇನೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ರುಜುವಾತಾಗಿದೆ.

2014ರಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಕೃಷಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ, 2015ರ ಮಧ್ಯಭಾಗದಲ್ಲಿ ಬಿಹಾರ, ಪಶ್ಚಿಮಬಂಗಾಳ, ಗೋವಾ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಉತ್ತರಖಂಡ್‍ನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ದೇಶದೆಲ್ಲೆಡೆ 12,360 ಮಂದಿ ಅನ್ನದಾತರು ಸಾವನ್ನಪ್ಪಿದರೆ, 2015ರಲ್ಲಿ 12602 ಪ್ರಕರಣಗಳು ದಾಖಲಾಗಿವೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಬೆಳೆ ನಷ್ಟ, ಖಾಸಗಿ ಲೇವಾದೇವಿದಾರರು ಹಾಗೂ ಬ್ಯಾಂಕ್‍ಗಳಲ್ಲಿ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮಹಾರಾಷ್ಟ್ರದ ವಿದರ್ಭ,ಆಂಧ್ರದ ರಾಯಲಸೀಮ, ತೆಲಂಗಾಣದ ನಕ್ಸಲ್‍ಪೀಡಿತ ಭಾಗಗಳಲ್ಲಿ ಹೆಚ್ಚಾಗಿ ರೈತರ ಆತ್ಮಹತ್ಯೆ ದಾಖಲಾಗಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin