ರೈತರ ಆತ್ಮಹತ್ಯೆ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ..? : ರಾಜ್ಯಗಳಿಗೆ ಸುಪ್ರೀಂ ಪ್ರಶ್ನೆ

Supreme-Court--0

ನವದೆಹಲಿ, ಮಾ.27-ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ಗಂಭೀರ ವಿಷಯವನ್ನು ನಿಭಾಯಿಸಲು ರಾಜ್ಯಗಳು ಯಾವ ಕ್ರಮಗಳನ್ನು ಕೈಗೊಂಡಿವೆ ಮತ್ತು ಕೈಗೊಳ್ಳಲು ಉದ್ದೇಶಿಸಿವೆ ಎಂಬ ಮಾಹಿತಿ ನೀಡುವಂತೆ ಕೇಂದ್ರಕ್ಕೆ ತಾಕೀತು ಮಾಡಿದೆ.   ಇದೊಂದು ಅತ್ಯಂತ ಗಂಭೀರ ವಿಷಯ ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕೈಗೊಳ್ಳಲು ಉದ್ದೇಶಿಸಲಾಗಿರುವ ಕ್ರಮಗಳ ಬಗ್ಗೆ ಇನ್ನು ನಾಲ್ಕು ವಾರಗಳೊಳಗೆ ವಿವರಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠ ಸೂಚಿಸಿದೆ.

ಕೃಷಿಕರ ಆತ್ಮಹತ್ಯೆಗೆ ಮೂಲ ಕಾರಣಗಳನ್ನು ಪತ್ತೆ ಮಾಡಿ ರೈತರು ಸಾವಿಗೆ ಶರಣಾಗುವುದನ್ನು ತಪ್ಪಿಸಲು ಒಂದು ಸಮಗ್ರ ನೀತಿಯನ್ನು ರೂಪಿಸುವಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಸ್.ಕೆ.ಕೌಲ್ ಅವರನ್ನೂ ಒಳಗೊಂಡ ಪೀಠ ವಿಚಾರಣೆ ವೇಳೆ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin