ರೈತರ ಸಾಲದ ಮೇಲಿನ ಶೇ.5 ರಷ್ಟು ಬಡ್ಡಿ ಮನ್ನಾ : ಕೇಂದ್ರ ಸರ್ಕಾರ ಘೋಷಣೆ
ನವದೆಹಲಿ, ಜೂ.14- ರೈತರ ಸಾಲಮನ್ನಾ ಮಾಡುವಂತೆ ದೇಶಾದ್ಯಂತ ಭಾರೀ ಪ್ರತಿಭಟನೆ ಮತ್ತು ಬೇಡಿಕೆಗಳು ಮುಂದುವರಿದಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಕೃಷಿಕರಿಗೆ ಕೆಲವು ಸಮಾಧಾನಕರ ಘೋಷಣೆ ಪ್ರಕಟಿಸಿದೆ. ಕೃಷಿ ಸಾಲಗಳ ಮೇಲೆ ಶೇ.2ರಷ್ಟು ಬಡ್ಡಿ ಸಬ್ಸಿಡಿ (ಸಹಾಯಧನ) ನೀಡಲು ಹಾಗೂ ಸಕಾಲದಲ್ಲಿ ಮರು ಪಾವತಿ ಮಾಡುವ ರೈತರಿಗೆ ಹೆಚ್ಚುವರಿಯಾಗಿ ಶೇ.3ರಷ್ಟು ರಿಯಾಯಿತಿ, ಒಟ್ಟಾರೆ ಶೇ.5ರಷ್ಟು ಬಡ್ಡಿ ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಸಾಲಮನ್ನಾ ರಾಜ್ಯ ಸರ್ಕಾರಗಳ ಹೊಣೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಖಡಾಖಂಡಿತವಾಗಿ ಹೇಳುವ ಮೂಲಕ ಸಾಲಮನ್ನಾ ಜವಾಬ್ದಾರಿಯನ್ನು ರಾಜ್ಯಗಳ ಹೆಗಲಿಗೇ ಕಟ್ಟಿದ್ದರು.
ಕಳೆದ ವಾರವಷ್ಟೇ ಮಧ್ಯ ಪ್ರದೇಶದ ಮಂದಸೌರ್ನಲ್ಲಿ ಸಾಲಮನ್ನಾ ಮಾಡಲು ಆಗ್ರಹಿಸಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಐವರು ಕೃಷಿಕರು ಮೃತಪಟ್ಟಿದ್ದರು. ಈ ಘಟನೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಕಾರಣವಾಗಿತ್ತು.
ಈ ಘಟನೆಯಿಂದಾಗಿ ಮಧ್ಯ ಪ್ರದೇಶದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗರ ಉಂಟಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS