ರೈಲಿನಲ್ಲಿ ಮದ್ಯ ಮಾರಾಟ : ಹಲವರ ಬಂಧನ

Spread the love

alcohal

ಕಾರವಾರ, ಸೆ.17- ರೈಲಿನಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪತ್ತೆಹಚ್ಚಿ ಹಲವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ಮಂಗಳೂರು-ಕುರ್ಲಾ ಮತ್ಸ್ಯ ಗಂಧ ರೈಲಿನಲ್ಲಿ ಸಾರ್ವಜನಿಕರಿಗೆ ಮದ್ಯ ಸರಬರಾಜು ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು.ಈ ಸಂಬಂಧ ಮಾರುವೇಷದಲ್ಲಿ ತುರ್ತು ಕಾರ್ಯಾಚರಣೆಗಿಳಿದ ರೈಲ್ವೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.  ಆರೋಪಿಗಳ ಹೇಳಿಕೆ ಪ್ರಕಾರ ಮದ್ಯ ಸಾಗಿಸುತ್ತಿದ್ದೆವು, ಆದರೆ ಪ್ರಯಾಣಿಕರಿಗೆ ಮಾರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆದಿದ್ದು, ಸುಮಾರು 20 ಸಾವಿರ ರೂ. ಮೌಲ್ಯದ ಗೋವಾ ರಾಜ್ಯದಲ್ಲಿ ತಯಾರಾದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin