ರೈಲ್ವೆ ವಿರುದ್ಧ ಎನ್‌ಜಿಟಿ ಆದೇಶಕ್ಕೆ ಸುಪ್ರೀಂ ತಡೆ

NGT
ನವದೆಹಲಿ, ಸೆ. 16- ಭಾರತೀಯ ರೈಲ್ವೆ ಮತ್ತು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್‌ನ (ಡಿಎಂಆರ್‌ಸಿ) ಕೆಲವು ಯೋಜನೆಗಳಿಗೆ ಪರಿಸರ ಒಪ್ಪಿಗೆ ನೀಡಬಾರದು ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್-ಎನ್‌ಜಿಟಿ) ಆದೇಶಕ್ಕೆ ಸುಪ್ರೀಂಕೋರ್ಟ್ ಇದು ತಡೆಯಾಜ್ಞೆ  ನೀಡಿದೆ.  ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠವು ಎನ್‌ಜಿಟಿ ಆದೇಶಕ್ಕೆ ತಡೆ ನೀಡಿದೆ.  ಭಾರತೀಯ ರೈಲ್ವೆ ಮತ್ತು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (ಡಿಎಂಆರ್‌ಸಿ) ತನ್ನ ಯೋಜನೆಗಳಿಗೆ ಪರಿಸರ ಅನುಮತಿಗಳನ್ನು ಪಡೆಯುವಂತೆ ಎನ್‌ಜಿಟಿ ಆದೇಶ ನೀಡಿತ್ತು. ಈ ಆದೇಶವನ್ನು ಕಾರ್ಯಗತಗೊಳಿಸುವಂತೆ ಅದು ಸುಪ್ರೀಂಕೋರ್ಟ್‌ನನ್ನು ಕೋರಿತ್ತು.  ಈ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ನ್ಯಾಯಮಂಡಳಿಯ ಆದೇಶವು ದೋಷಯುಕ್ತವಾಗಿದೆ ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅನುಮತಿ ಕೋರಿದರೆ ಯೋಜನೆಗಳು ವಿಳಂಬವಾಗುತ್ತವೆ ಎಂದು ದೆಹಲಿ ಮೆಟ್ರೋ ಮತ್ತು ಭಾರತ ಸೂಕ್ಷ್ಮ ಸರಕು ಪಥ ನಿಗಮ(ಡಿಎಫ್‌ಸಿಸಿಐಎಲ್) ವಾದಿಸಿದ್ದವು. ಮೇಲ್ನೋಟಕ್ಕೆ ಈ ವಾದಗಳನ್ನು ಒಪ್ಪಬಹುದು ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಪೀಠವು ತಡೆಯಾe ನೀಡಿದೆ.

ಬೆಂಗಳೂರು ವರದಿ :

ಕೆರೆಗಳು ಮತ್ತು ರಾಜಕಾಲುವೆಗಳ ಸುತ್ತಮುತ್ತ ಇನ್ನು ಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಎನ್‌ಜಿಟಿ ಹೊರಡಿಸಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ ಈ ತೀರ್ಪು ರಾಜ್ಯಕ್ಕೆ ಪೂರಕವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಕಾರ, ಎನ್‌ಜಿಟಿಗೆ ಸಂಬಂಧಪಟ್ಟ ವಿಷಯಗಳು ಮತ್ತು ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದ ಕುರಿತ ಸಭೆಯಲ್ಲಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ.

► Follow us on –  Facebook / Twitter  / Google+

Sri Raghav

Admin