ರೋಗ ಉಲ್ಬಣಕ್ಕೆ ಮುಂಚೆ ಚಿಕಿತ್ಸೆ ಪಡೆಯಬೇಕು

1

ಮೂಡಲಗಿ,ಸೆ.28- ರೋಗವು ಉಲ್ಬಣವಾಗುವುದಕ್ಕೆ ಮುಂಚೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದು ಸ್ತ್ರೀರೋಗ ಮತ್ತು ಹೆರಿಗೆ ತಜ್ಞ ಡಾ. ಹಂಪಣಗೌಡ ಎನ್. ಪಾಟೀಲ ಹೇಳಿದರು.ಇಲ್ಲಿಯ ಲಯನ್ಸ್ ಕ್ಲಬ್ ಪರಿವಾರ ಹಾಗೂ ಆರೋಗ್ಯ ಧಾಮ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ತ್ರೀರೋಗಗಳ ಹಾಗೂ ಎಲುವು ಕೀಲುಗಳ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರವು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾಕಷ್ಟು ಬದಲಾವಣೆಯನ್ನು ಕಂಡಿದ್ದು, ಎಲ್ಲ ರೋಗಗಳಿಗೆ ವೈದ್ಯಕೀಯ ರಂಗದಲ್ಲಿ ಪರಿಹಾರ ಇದೆ. ಸ್ತ್ರೀರೋಗಗಳಿಗೆ ಸಂಬಂಧಿಸಿದಂತೆ ಕಾಯಲೆಗಳನ್ನು ಗುರುತಿಸುವ ಕ್ಯಾಮೆರಾಸಹಿತ ಸೂಕ್ಷ್ಮದರ್ಶಕ ಉಪಕರಣಗಳು ಲಭ್ಯವಿದ್ದು, ಅಂಥ ಆಧುನಿಕ ಸ್ಪರ್ಷದಿಂದ ಶಸ್ತ್ರಚಿಕಿತ್ಸೆ ಇಲ್ಲದೆ ರೋಗಗಳನ್ನು ವಾಸಿ ಮಾಡಬಹುದಾಗಿದೆ ಎಂದರು. ಎಲವು ಕೀಲು ಮತ್ತು ಜಾಯಿಂಟ್ ರಿಪ್ಲೆಸ್‍ಮೆಂಟ್ ತಜ್ಞ ಡಾ. ಜಗದೀಶ ವಿ. ಸೂರಣ್ಣವರ ಮಾತನಾಡಿ, ಎಲುವು ಮತ್ತು ಸಂಧುಗಳಿಗೆ ಸಂಬಂಧಿಸಿದ ಕಾಯಲೆಗಳಿಂದ ಬಹಳಷ್ಟು ಜನರು ಬಳಲುತಿದ್ದು, ಅಂಥ ತೊಂದರೆಗಳನ್ನು ನಿರ್ಲಕ್ಷ ಮಾಡದೆ ಕೂಡಲೇ ವೈದ್ಯರನ್ನು ಕಾಣಬೇಕು.ಎಲುವು ಮತ್ತು ಸಂಧುಗಳ ಸಂಬಂಧಿಸಿದ ಕಾಯಲೆಗಳನ್ನು ಆಧುನಿಕ ವೈದ್ಯಕೀಯ ಪದ್ದತಿ ಮೂಲಕ ತೀವ್ರವಾಗಿ ಗುಣಪಡಿಸಬಹುದಾಗಿದೆ ಎಂದರು.

ಚರ್ಮರೋಗ ತe್ಞÉ ಡಾ. ನಯನಾ ಖನದಾಳೆ ಚರ್ಮ ರೋಗ ಮತ್ತು ಚರ್ಮದ ಆರೋಗ್ಯ ಕಾಪಾಡುವ ಬಗ್ಗೆ ಮಾತನಾಡಿದರು. ಡಾ. ಅನಿಲ ಪಾಟೀಲ ಮಾತನಾಡಿ ಮೂಡಲಗಿ ಪಟ್ಟಣಕ್ಕೆ ಅವಶ್ಯವಿದ್ದ ಸ್ತ್ರೀರೋಗ ಮತ್ತು ಎಲುವು ಕೀಲುಗಳ ತಜ್ಞರ ಕೊರತೆಯನ್ನು ಡಾ. ಹಂಪನಗೌಡರ ಮತ್ತು ಡಾ. ಸೂರಣ್ಣವರ ಅವರು ನೀಗಿಸಿದ್ದಾರೆ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ್ ಮಾತನಾಡಿ ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ತಪಾಸಣೆಯಿಂದ ಬಡಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಡಾ. ಎಸ್.ಎಸ್. ಪಾಟೀಲ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕಣ್ಣವರ, ಸಂಜಯ ಮೋಕಾಶಿ, ವಿಜಯ ಸೋನವಾಲ್ಕರ, ಸುರೇಶ ನಾವಿ, ಗಿರೀಶ ಆಸಂಗಿ, ಸಂದೀಪ ಸೋನವಾಲ್ಕರ, ಶಿವಾನಂದ ಗಾಡವಿ, ವಿಶಾ ಶೀಲವಂತ ಇದ್ದರು.

 

► Follow us on –  Facebook / Twitter  / Google+

Sri Raghav

Admin