ಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್ ಗಳ ಭರ್ಜರಿ ಜಯ
ದಾಂಬುಲಾ. ಆ.20 : ಇಲ್ಲಿನ ರಣಗಿರಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್(132) ಅಜೇಯ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿಯ(82) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ 9 ವಿಕೆಟ್ ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 216 ರನ್ ಗಳಿಗೆ ಆಲ್ ಔಟ್ ಆಗಿತ್ತು. ಶ್ರೀಲಂಕಾ ಪರವಾಗಿ ನಿರೊಶನ್ ಡಿಕ್ವೆಲಾ 64, ಧನುಷ್ಕ ಗುಣತಿಲಕ 34 ಉತ್ತಮ ಆರಂಭ ಒದಗಿಸಿದರು. ಕುಶಾಲ್ ಮೆಂಡಿಸ್ 36, ಉಪುಲ್ ತರಂಗಾ 13, ಏಂಜೆಲೊ ಮ್ಯಾಥ್ಯೂಸ್ ಅಜೇಯ 36, ಚಾಮರಾ ಕಪುಗೆದೆರಾ 1, ವೆನಿಂದು ಹಸರಂಗಾ 2, ತಿಸಾರಾ ಪೆರೆರಾ 0, ಲಕ್ಷ್ಮಣ್ ಸಂದಕನ್ 5, ಲಸಿತ್ ಮಾಲಿಂಗಾ 8, ವಿಶ್ವ ಫೆರ್ನಾಂಡೊ 0 ರನ್ ಗಳಿಸಿದ್ದರು.
ಭಾರತದ ಪರ ಮಾರಕ ದಾಳಿ ನಡೆಸಿದ ಅಕ್ಷರ್ ಪಟೇಲ್ 3, ಕೇದಾರ್ ಜಾಧವ್ 2, ಯಜುವೇಂದ್ರ ಚಾಹಲ್ 2, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರು. 43.2 ಓವರ್ ಗಳಲ್ಲಿ 216 ರನ್ ಗಳಿಗೆ ಲಂಕಾ ಎಲ್ಲಾ ವಿಕೆಟ್ ಕಳೆದುಕೊಂಡು, ಭಾರತದ ಗೆಲುವಿಗೆ 217 ರನ್ ಗುರಿ ನೀಡಿತ್ತು. ಸರಳ ಗುರಿ ಬೆನ್ನಟ್ಟಿದ ಭಾರತದ ಪರವಾಗಿ ಧವನ್-ರೋಹಿತ್ ಆರಂಭಿಕರಾಗಿ ಕಣಕ್ಕಿಳಿದರು. ರೋಹಿತ್ ಕೇವಲ ನಾಲ್ಕು ರನ್ ಗಳಿಗೆ ಔಟಾದ ನಂತರ ಧವನ್ ಜೊತೆಯಾದ ನಾಯಕ ಕೊಹ್ಲಿ ಭರ್ಜರಿ ಜೊತೆಯಾಟವಾಡಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಶಿಖರ್ ಧವನ್ ಅಜೇಯ 132, ವಿರಾಟ್ ಕೊಹ್ಲಿ ಅಜೇಯ 82 ರನ್ ಗಳಿಸಿದ್ದಾರೆ.
.
ಸ್ಕೋರ್ :