ಭಾರತಕ್ಕೆ ಐತಿಹಾಸಿಕ ಜಯ, ಶ್ರೀಲಂಕಾ ಲಂಕಾ ವೈಟ್‍ವಾಶ್, ಧವನ್ ಸರಣಿ ಶ್ರೇಷ್ಠ

3rd-Test--01

ಪಲ್ಲೆಕಲೆ(ಶ್ರೀಲಂಕಾ), ಆ.14- ದ್ವೀಪ ರಾಷ್ಟ್ರದಲ್ಲಿ ಅಧಿಪತ್ಯ ಮೆರೆದ ಭಾರತ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸುವ ಮೂಲಕ ಐತಿಹಾಸಿಕ ವಿಜಯ ಸಾಧಿಸಿದೆ.  ಪಲ್ಲೆಕಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ದಿನದಾಟದಲ್ಲಿ ಶ್ರೀಲಂಕಾ 181 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 171 ರನ್‍ಗಳ ಅಂತರದಿಂದ ಜಯ ಸಾಧಿಸಿತು.

ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಸಿಂಹಳಿಯರನ್ನು ಮೂರು ದಿನದಲ್ಲೇ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದು ಮೂರು ಟೆಸ್ಟ್ ಪಂದ್ಯಗಳನ್ನು ಸೋಲುವ ಮೂಲಕ ಲಂಕಾ ವೈಟ್‍ವಾಶ್ ಆಗಿ ಮುಖಭಂಗ ಅನುಭವಿಸಿತು.  ಪಂದ್ಯ ಆರಂಭವಾದ ಒಂದೂವರೆ ದಿನದಲ್ಲಿ ಭಾರತದ ಬ್ಯಾಟ್ಸ್‍ಮೆನ್‍ಗಳ ಆಟದ ಚಿತ್ತಾರೆ ಮೂಡಿ ಬಂದರೆ ನಿನ್ನೆ ವಿರಾಮವಾದ ಮೇಲೆ ಚೈನ್‍ಮ್ಯಾನ್ ಕುಲದೀಪ್‍ಯಾದವ್ ಸ್ಪಿನ್ ದಾಳಿಗೆ ಸಿಲುಕಿ ಲಂಕಾ ಬ್ಯಾಟ್ಸ್‍ಮೆನ್‍ಗಳು ಮೊದಲ ಇನ್ನಿಂಗ್ಸ್‍ನಲ್ಲಿ 135ರನ್‍ಗೆ ತನ್ನ ಆಟ ಮುಗಿಸಿತ್ತು.

ಇದರಿಂದ ಭಾರೀ ಹಿನ್ನಡೆ ಅನುಭವಿಸಿ ಲಂಕಾ ಫಾಲೋಹಾನ್‍ನೊಂದಿಗೆ ದ್ವಿತೀಯ ಇನ್ನಿಂಗ್ಸ್‍ನಲ್ಲಿ ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿಕೊಂಡಿತ್ತು. ಹದಿಮೂರು ಒವರ್‍ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 19ರನ್‍ಗಳಿಂದ ದಿನದಾಟ ಆರಂಭಿಸಿದ ಲಂಕಾ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಮತ್ತಷ್ಟು ಹತ್ತಿರವಾಯಿತು. ಧೀಮುತ್ ಕರುಣಾರತ್ನೆ(12)ತಮ್ಮ ಮೊತ್ತಕ್ಕೆ ಕೇವಲ 4 ರನ್ ಸೇರಿಸಿ ಅಶ್ವಿನ್ ಬೌಲಿಂಗ್‍ನಲ್ಲಿ ಔಟಾದರು. ಪುಷ್ಪಕ್‍ಕುಮಾರ್(1)ಹಾಗೂ ಮಂಡೀಸ್(12)ಅವರ ವಿಕೆಟನ್ನು ಸೆಮಿ ಪಡೆದು ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು.

ಕೇವಲ 20ರನ್ ಅಂತರದಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‍ಮನ್‍ಗಳು ಔಟಾದರು. ನಾಲ್ಕು ವಿಕೆಟ್‍ಗೆ 39 ರನ್‍ಗಳಿದ್ದಾಗ ಲಂಕಾ 100 ರನ್ ಒಳಗೆ ಆಲ್‍ಔಟಾಗುವ ಭೀತಿಯಲ್ಲಿತ್ತು. ಈ ವೇಳೆ ಚಂಡಿಮಹಲ್ ಹಾಗೂ ಮ್ಯಾಥ್ಯೂಸ್ ನಿಧಾನಗತಿಯಲ್ಲಿ ಆಟವಾಡಿ ಸ್ವಲ್ಪ ಪ್ರತಿರೋಧ ನೀಡುತ್ತಿದ್ದಾರೆ.
ನಂತರ ಕೊನೆಯಲ್ಲಿ ಕೆಳ ಕ್ರಮಾಂಕದ ಆಟಗಾರರು ಪಂದ್ಯ ಕೈ ತಪ್ಪಿದ್ದನ್ನು ಅರಿತು ಹೇಗೆಂದರೆ ಹಾಗೆ ಬ್ಯಾಟ್ ಬೀಸಿ ರನ್ ಗಳಿಸಲು ಪ್ರಯತ್ನಿಸಿದರು. ಆದರೂ ಅಂತಿಮವಾಗಿ 181 ರನ್‍ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನಿಂದ ವಿರಾಟ್ ಕೊಹ್ಲಿ ಪಡೆ ಹಿರಿಹಿರಿ ಹಿಗ್ಗಿತು.

ವಿದೇಶದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ಕಂಡ ಅದ್ಭುತ ಗೆಲುವು ಇದಾಗಿತ್ತು. ಆಲ್ ರೌಂಡರ್ ಆಟ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ ರನ್ ಹೊಳೆಯನ್ನೇ ಹರಿಸಿದ ಶಿಖರ್ ಧವನ್ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್ : 

ಭಾರತ- 487, ಶ್ರೀಲಂಕಾ-ಪ್ರಥಮ ಇನ್ನಿಂಗ್ಸ್ -135, ದ್ವಿತೀಯ ಇನ್ನಿಂಗ್ಸ್ 181.
ಸರಣಿ ವಿವರ:
ಪ್ರಥಮ ಪಂದ್ಯ, ಗಾಲೆ- ಭಾರತಕ್ಕೆ 304 ರನ್‍ಗಳ ಜಯ
ದ್ವಿತೀಯ ಪಂದ್ಯ-ಕೊಲೊಂಬೊ- ಭಾರತಕ್ಕೆ ಇನ್ನಿಂಗ್ಸ್ ಮತ್ತು 53 ರನ್‍ಗಳ ಜಯ
ತೃತೀಯ ಪಂದ್ಯ, ಪಲ್ಲೆಕಲೆ- ಭಾರತಕ್ಕೆ ಇನ್ನಿಂಗ್ಸ್ 171 ರನ್‍ಗಳ ಜಯ.

Sri Raghav

Admin