ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ರೇಷ್ಮೆ ಇಲಾಖೆ ನೌಕರ
ದಾವಣಗೆರೆ, ಜ.8- ಜಿಲ್ಲೆಯ ಹುಣಸೆಕಟ್ಟೆಯಲ್ಲಿರುವ ರೇಷ್ಮೆ ಇಲಾಖೆಯ ಹರಪ್ಪನಹಳ್ಳಿ ವಲಯ ಅಧಿಕಾರಿಯೊಬ್ಬರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ರೇಷ್ಮೆ ಅಧಿಕಾರಿ ಬಣಕಾರ್ ತೀರ್ಥಕುಮಾರ್ ಎಂಬುವರು ರೇಷ್ಮೆ ಕೃಷಿ ಕೊಠಡಿ ನಿರ್ಮಾಣಕ್ಕೆ ರೈತ ರೇವಣಸಿದ್ದಪ್ಪ ಎಂಬುವರಿಗೆ ಸಬ್ಸಿಡಿ ಹಣ ನೀಡಲು ಮೂರುವರೆ ಸಾವಿರ ರೂಪಾಯಿ ಲಂಚ ಕೇಳಿದ್ದ. ಸಹಾಯಕ ನಿರ್ದೇಶಕ ಜಗದೀಶ್ ಎಂಬುವರಿಗೆ ಹಣ ಕೊಡಬೇಕು, ಅದಕ್ಕಾಗಿ ಮೂರುವರೆ ಸಾವಿರ ರೂ. ಕೊಡಿ ಈ ಹಣ ಕೊಟ್ಟರೆ ನಿಮಗೆ ಬರಬೇಕಾಗಿರುವ ಸಬ್ಸಿಡಿ ಹಣ ಮಂಜೂರು ಮಾಡಲಾಗುವುದು ಎಂದು ಹೇಳಿದ್ದ.
ಈ ಹಿನ್ನೆಲೆಯಲ್ಲಿ ರೈತ ರೇವಣಸಿದ್ದಪ್ಪ ಎಸಿಬಿ ಅಧಿಕಾರಿಗಳಿಗೆ ಈ ವಿಷಯ ತಿಳಿಸಿ ನಿನ್ನೆ ರಾತ್ರಿ ಹಣ ಕೊಡಲು ಬಣಕಾರ್ ತೀರ್ಥಕುಮಾರ್ ಅವರ ಮನೆಗೆ ತೆರಳಿ ನಗದು ಹಣ ನೀಡುತ್ತಿದ್ದಂತೆ ಅಧಿಕಾರಿಗಳು ಬಂದು ರೆಡ್ಹ್ಯಾಂಡಾಗಿ ತೀರ್ಥಕುಮಾರ್ನನ್ನು ಅರೆಸ್ಟ್ ಮಾಡಿದ್ದಾರೆ.