ಲಕ್ಷಾಂತರ ಡಾಲರ್ ಕಾಲ್‍ಸೆಂಟರ್‍ಗಳ ಹಗರಣ : ತಪ್ಪೊಪ್ಪಿಕೊಂಡ ಭಾರತದ ಯುವಕ

Spread the love

Call-Ceter-Scam--01

ನ್ಯೂಯಾರ್ಕ್, ಏ.27-ಭಾರತದ ಕಾಲ್‍ಸೆಂಟರ್‍ಗಳ ಮೂಲಕ ಬಹು ಕೋಟಿ ಡಾಲರ್ ಹಗರಣದಲ್ಲಿ ಶಾಮೀಲಾದ 28 ವರ್ಷದ ಭಾರತೀಯ ಯುವಕನೊಬ್ಬನನ್ನು ಅಮೆರಿಕ ನ್ಯಾಯಾಲಯವೊಂದು ದೋಷಿ ಎಂದು ಪರಿಗಣಿಸಿದೆ.   ಟೆಕ್ಸಾಸ್‍ನ ದಕ್ಷಿಣ ಜಿಲ್ಲೆಯ ನ್ಯಾಯಾಧೀಶ ಡೇವಿಡ್ ಹಿಟ್ನರ್ ಅವರ ಮುಂದೆ ನಾನು ತಪ್ಪಿತಸ್ಥ ಎಂಬುದನ್ನು ಅಶ್ವಿನ್‍ಭಾಯ್ ಚೌಧರಿ ಒಪ್ಪಿಕೊಂಡಿದ್ದಾನೆ. ಈತನಿಗೆ ಜುಲೈನಿಂದ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಅಮೆರಿಕದ ವಿವಿಧೆಡೆ ಜನರನ್ನು ತನ್ನ ವಂಚನೆ ಜಾಲಕ್ಕೆ ಕೆಡವಲು ಈತ ತೆರಿಗೆ ಮತ್ತು ವಲಸೆ ಅಧಿಕಾರಿಗಳನ್ನು ಸಹ ತಪ್ಪುದಾರಿಗೆ ಎಳೆದಿದ್ದ.ಭಾರತೀಯ ಮೂಲದ ಕಾಲ್ ಸೆಂಟರ್‍ಗಳ ಮೂಲಕ ಹಣ ದುರುಪಯೋಗ ಮಾಡಿಕೊಂಡ ಹಾಗೂ ಅಕ್ರಮವಾಗಿ ಹಣಗಳಿಸಿದ ಆರೋಪವು ಸಾಬೀತಾಗಿದೆ.
ಬಹು ದಶಲಕ್ಷ ಡಾಲರ್‍ಗಳ ವಂಚನೆ ಪ್ರಕರಣಗಳಲ್ಲಿ ಶಾಮೀಲಾದ ಆರೋಪದ ಮೇಲೆ ಈವರೆಗೆ ಚೌಧರಿ, ಇತರ 50 ವ್ಯಕ್ತಿಗಳು ಹಾಗೂ ಐದು ಕಾಲ್ ಸೆಂಟರ್‍ಗಳ ವಿರುದ್ಧ ದೂರುಗಳು ದಾಖಲಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin