ಲಾರಿ-ಬೈಕ್ ಮುಖಾಮುಖಿ : ಸವಾರ ಸಾವು

Spread the love

accident

ಗೌರಿಬಿದನೂರು, ಅ.27- ದ್ವಿಚಕ್ರ ವಾಹನ ಮತ್ತು ಸರಕು ಸಾಗಾಣಿಕೆ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮಧುಗಿರಿ ರಸ್ತೆಯ ಮಾರುತಿ ಬಡಾವಣೆಯ ಬಳಿ ನಡೆದಿದೆ. ಪಟ್ಟಣದ ವಾಸಿ ಮೂಲತಃ ಹೊಸೂರು ಹೋಬಳಿಯ ಸೊನಗಾನಹಳ್ಳಿ ಗ್ರಾಮದ ವಾಸಿ ರವಿಕುಮಾರ್(26) ಮೃತ ದುರ್ದೈವಿ. ಹಿಂಬದಿಯಲ್ಲಿ ಕುಳಿತ್ತಿದ್ದ ಮೃತನ ಪತ್ನಿ ವನಜಾಕ್ಷಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಸ್ಥಳಕ್ಕೆ ಪುರಠಾಣೆ ಎಸ್‍ಐ ನಯಾಜ್ ಬೇಗ್ ಭೇಟಿ ನೀಡಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.

 

► Follow us on –  Facebook / Twitter  / Google+

Facebook Comments

Sri Raghav

Admin