ಲೋಕಾಯುಕ್ತರ ಮೇಲಿನ ದಾಳಿ ಗೂಂಡಾ ಸರ್ಕಾರದ ಮತ್ತೊಂದು ನಿದರ್ಶನ : ಅಶೋಕ್

Spread the love

R.Ashok
ಬೆಂಗಳೂರು, ಮಾ.7-ಲೋಕಾಯುಕ್ತ ರಾಜ್ಯದ ಪರಮೋಚ್ಛ ದೇವಾಲಯವಿದ್ದಂತೆ. ಇಂತಹ ದೇವಾಲಯದಲ್ಲೇ ಚಾಕು ಇರಿತ ಘಟನೆ ದಿಗ್ಬ್ರಮೆ ಉಂಟು ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು. ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಕಚೇರಿಯಲ್ಲೇ ಚಾಕುವಿನಿಂದ ಇರಿದಿರುವ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಸರ್ಕಾರ ಗೂಂಡಾ ಪರವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಖಾರವಾಗಿ ನುಡಿದರು.
ಲೋಕಾಯುಕ್ತಕ್ಕೆ ರಕ್ಷಣೆ ನೀಡದ ಸರ್ಕಾರ ಜನರಿಗೆ ಅದು ಹೇಗೆ ರಕ್ಷಣೆ ನೀಡುತ್ತದೆ. ಇಂತಹ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಕಚೇರಿಯ ಘಟನೆಯಿಂದ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

Sri Raghav

Admin