ಲೋಧಾ ಸಮಿತಿ ಜೊತೆ ತಿಕ್ಕಾಟ : ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ ರದ್ದುಮಾಡುವುದಾಗಿ ಬಿಸಿಸಿಐ ಬೆದರಿಕೆ

BCCI-01

ನವದೆಹಲಿ, ಅ.4- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ನ್ಯಾ.ಲೋಧಾ ಸಮಿತಿ ನಡುವೆ ನಡೆಯುತ್ತಿರುವ ತಿಕ್ಕಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ಲೋದ ಸಮಿತಿಯ ಶಿಫಾರಸುಗಳನ್ನು ಉಲ್ಲಂಘಿಸಲು ನಿರ್ಧರಿಸಿರುವ ಬಿಸಿಸಿಐ ಈಗ ನಡೆಯುತ್ತಿರುವ ಭಾರತ ಮತ್ತು ನ್ಯೂಜೆಲೆಂಡ್ ಟೆಸ್ಟ್ ಸರಣಿಯನ್ನು ರದ್ದುಗೊಳಿಸುವ ಬೆದರಿಗೆ ಹಾಕಿದೆ.
ನ್ಯಾಯಮೂರ್ತಿ ಲೋಧಾ ಸಮಿತಿಯು ಬಿಸಿಸಿಐ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಈಗ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯು ರದ್ದಾಗುವ ಭೀತಿ ಎದುರಾಗಿದೆ.

ಬಿಸಿಸಿಐನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದರಿಂದ ಹಣದ ವಹಿವಾಟಿಗೆ ತಡೆಬಿದ್ದಿದೆ. ಹೀಗಾಗಿ ಪಂದ್ಯಾವಳಿಗಳನ್ನು ನಡೆಸಲು ಹಣ ಮುಗ್ಗಟ್ಟು ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ನಿರ್ಧಾರಕ್ಕೆ ಬಂದಂತಾಗಿದೆ. ಈ ಬಗ್ಗೆ ಪ್ರತಿಕ್ರಿಸಿದ ಬಿಸಿಸಿಐ ಮೂಲಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ನಡೆಸಲು ಹಣದ ವಹಿವಾಟು ಅವಶ್ಯಕ. ಆದರೆ, ಸುಪ್ರೀಂಕೋರ್ಟ್ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಹಣದ ವಹಿವಾಟು ನಡೆಸಬಾರದು ಎಂದು ಹೇಳಿದ್ದರಿಂದ ಈ ಸಮಸ್ಯೆ ಉಲ್ಬಣಗೊಂಡಿದೆ.

ನ್ಯಾಯಮೂರ್ತಿ ಲೋಧಾ ಸಮಿತಿಯ ಸೂಚನೆ ಏನು?:

ನ್ಯಾ.ಲೋಧಾ ಸಮಿತಿಯು ನೀಡಿದ ಶಿಫಾರಸುಗಳನ್ನು ಬಿಸಿಸಿಐ ಜಾರಿಗೆ ತಂದಿಲ್ಲ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಸಿಸಿಐನ ವಹಿವಾಟು ಸ್ಥಗಿತಗೊಳಿಸುವಂತೆ ಬ್ಯಾಂಕುಗಳಿಗೆ ನಿರ್ದೇಶನ ಮಾಡಿದ್ದೇವೆ. ಎಷ್ಟೇ ತುರ್ತು ಸಮಸ್ಯೆ ಎದುರಾದರೂ ಬಿಸಿಸಿಐ ಹಣ ವ್ಯವಹಾರ ನಡೆಸಬಾರದು ಎಂದು ಕಟ್ಟಪ್ಪಣೆ ನೀಡಿತ್ತು.
ಸೆ.30ರಂದು ನಡೆದ ಬಿಸಿಸಿಐ ತುರ್ತು ಸಮಿತಿ ಸಭೆಯಲ್ಲಿ ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಅನುದಾನ ನೀಡುವ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲೋಧಾ ಸಮಿತಿ ಬ್ಯಾಂಕ್‍ಗಳಿಗೆ ಪತ್ರ ಬರೆದಿತ್ತು. ಈ ನಿಯಮದಂತೆ ಬ್ಯಾಂಕುಗಳು ಹಣಕಾಸು ವಹಿವಾಟು ಮಾಡಬಾರದು ಎಂದು ನಿರ್ದೇಶನ ಮಾಡಿದೆ.

ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಕುತ್ತು ಬರಲಿದೆಯೇ?:

ಹಲವು ದಿನಗಳಿಂದ ನ್ಯಾ.ಲೋದ ಶಿಫಾರಸನ್ನು ಜಾರಿಗೆ ತರಬೇಕೆಂದು ಹಲವು ಬಾರಿ ಬಿಸಿಸಿಐಗೆ ತಿಳಿಸಿತ್ತು. ಈ ಶಿಫಾರಸಿನ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದರು.  ಇದಕ್ಕೆ ಕೆಂಗಣ್ಣು ಬೀರಿದ ಸುಪ್ರೀಂಕೋರ್ಟ್ ಬಿಸಿಸಿಐ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಯಾವುದೇ ವ್ಯವಹಾರ ನಡೆಸಬಾರದು ಎಂದು ಸೂಚನೆ ನೀಡಿತ್ತು. ಹೀಗಾಗಿ ಯಾವುದೇ ಸರಣಿ ನಡೆಸಲು ಹಣಕಾಸು ವ್ಯವಹಾರದ ಮೂಲಕ ಸರಣಿ ನಡೆಸಬೇಕು. ಇಲ್ಲದಿದ್ದರೆ ವಿಶ್ವದಲ್ಲಿ ಅತಿ ಶ್ರೀಮಂತ ಕ್ರಿಕಟ್ ಸಂಸ್ಥೆಯಾದ ಬಿಸಿಸಿಐಗೆ ಕುತ್ತು ಬರಲಿದೆ. ಮುಂಬರುವ ಸರಣಿಯನ್ನು ಆಯೋಜನೆ ಮಾಡಲು ಬಿಸಿಸಿಐಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ದೊಡ್ಡ ಮಾರಕವಾಗಿ ಪರಿಣಮಿಸಲಿದೆ.

► Follow us on –  Facebook / Twitter  / Google+

Sri Raghav

Admin