ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನ ಚಕ್ರ ಸ್ಫೋಟ : 128 ಪ್ರಯಾಣಿಕರು ಪಾರು

Air-India-01

ಮುಂಬೈ, ಅ.18-ಏರ್ ಇಂಡಿಯಾ ವಿಮಾನವೊಂದರ ಚಕ್ರ ಸ್ಫೋಟಗೊಂಡು 128 ಪ್ರಯಾಣಿಕರು ಮತ್ತು ಸಿಬ್ಬಂದಿ ಪವಾಡ ಸದೃಶ ಪಾರಾದ ಘಟನೆ ಇಂದು ಮುಂಜನೆ ಮುಂಬೈ ನಗರದ ಛತ್ರಪತಿ ಶಿವಾಜಿ ಇಂಟರ್‍ನ್ಯಾಷನಲ್ ಏರ್ಪೋರ್ಟ್ನಲ್ಲಿ ನಡೆದಿದೆ. ಅಹಮದಾಬಾದ್‍ನಿಂದ ಮುಂಬೈಗೆ ಬಂದ ಎಐ 614 ವಿಮಾನವು ಅಂತಾರಾಷ್ಟ್ರೀಯ ವಿಮಾನದಲ್ಲಿ ಬೆಳಿಗ್ಗೆ 9.04ರ ವೇಳೆ ಭೂಸ್ಪರ್ಶ ಮಾಡುವಾಗ ಚಕ್ರವು ಸ್ಪೋಟಗೊಂಡಿತು. ಅದೃಷ್ಟವಶಾತ್ ಈ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಅಪಾಯವಾಗಲಿಲ್ಲ.
ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ, ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಏರ್‍ಇಂಡಿಯಾದ ವಕ್ತಾರರು ತಿಳಿಸಿದ್ದಾರೆ. ಈ ಘಟನೆ ನಂತರ ವಿಮಾನದಲ್ಲಿ ಕೆಲಕಾಲ ಗೊಂದಲದ ವಾತಾವರಣ ತಲೆದೋರಿತ್ತು. ಈ ವಿಮಾನದಲ್ಲಿದ್ದ ಪ್ರಯಾಣಿಕರ ಮುಂದಿನ ಪಯಣಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin