ವಂಚನೆ ಪ್ರಕರಣಗಳಲ್ಲಿ ಐಸಿಐಸಿಐ ಬ್ಯಾಂಕ್ಗೆ ಅಗ್ರ ಸ್ಥಾನ : ಆರ್ಬಿಐ
ನವದೆಹಲಿ, ಮಾ.13- ಪ್ರಧಾನಮಂತ್ರಿ ನರೇಂದ್ರ ಮೋದಿ 500 ಹಾಗೂ 1000 ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ದೇಶದ ವಿವಿಧ ಬ್ಯಾಂಕ್ಗಳಲ್ಲಿ ನಡೆದ ವಂಚನೆಯ ಪಟ್ಟಿಯಲ್ಲಿ ಐಸಿಐಸಿಐ ಮೊದಲ ಸ್ಥಾನದಲ್ಲಿದೆ ಎಂದು ಆರ್ಬಿಐ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ಏಪ್ರಿಲ್- ಡಿಸೆಂಬರ್ 9 ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ನಡೆದಿರುವ ವಂಚನೆಗಳ ಆಧಾರದ ಮೇಲೆ ಐಸಿಐಸಿಐ ಬ್ಯಾಂಕ್ನಲ್ಲಿ 455 ವಂಚನೆ ಪ್ರಕರಣಗಳು ನಡೆದಿದ್ದರೆ, ಎಸ್ಬಿಐ (429), ಸ್ಟ್ಯಾಂಡರ್ಡ್ ಚಾರ್ಟೆಡ್ (244) ಹಾಗೂ ಎಚ್ಡಿಎಫ್ಸಿ (237) , ಆ್ಯಕ್ಸಿಸ್ ಬ್ಯಾಂಕ್ (189), ಬ್ಯಾಂಕ್ ಆಫ್ ಬರೋಡಾ (176) ಹಾಗೂ ಸಿಟಿ ಬ್ಯಾಂಕ್ (150) ವಂಚನೆ ಪಟ್ಟಿಯ ನಂತರದ ಸ್ಥಾನಗಳಲ್ಲಿದೆ.
ಹಣದ ವಂಚನೆಯಲ್ಲಿ ಎಸ್ಬಿಐ ಮುಂದು:
ವಂಚನೆ ಪ್ರಕರಣದಲ್ಲಿ 2 ಸ್ಥಾನದಲ್ಲಿರುವ ಎಸ್ಬಿಐ ಬ್ಯಾಂಕ್ ಹಣದ ವಂಚನೆ ಪ್ರಕರಣದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬ್ಯಾಂಕ್ ಇದುವರೆಗೂ 2,236.81 ಕೋಟಿ ಗಳಿಗೂ ಹೆಚ್ಚು ವಂಚಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (2,250.34 ಕೋಟಿ), ಆ್ಯಕ್ಸಿಸ್ (1,998.49 ಕೋಟಿ) ನಂತರದ ಸ್ಥಾನದಲ್ಲಿವೆ.
ಏಪ್ರಿಲ್- ಡಿಸೆಂಬರ್ ಒಳಗಾಗಿ ಈ ವಂಚನೆ ಪ್ರಕರಣಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ಗಳು ಸೇರಿದಂತೆ ಒಟ್ಟು 450 ಸಿಬ್ಬಂದಿಗಳು ಶಾಮೀಲಾಗಿದ್ದು , ಇವುಗಳಲ್ಲಿ 3,870 ಕೇಸ್ಗಳಲ್ಲಿ 17,750.27 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಆರ್ಬಿಐ ಮೂಲಗಳು ತಿಳಿಸಿವೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿಗೆ ದಾಖಲೆಯನ್ನು ಒದಗಿಸಲಾಗುವುದು ಎಂದು ಆರ್ಬಿಐನ ಮೂಲಗಳು ತಿಳಿಸಿವೆ.
< Eesanje News 24/7 ನ್ಯೂಸ್ ಆ್ಯಪ್ >