ವಚನ ಸಾಹಿತ್ಯ ನೊಂದವರ ಬದುಕಿನ ನಿತ್ಯ ಸತ್ಯ

13

ಬೆಳಗಾವಿ,ಮಾ.13– ವಚನ ಸಾಹಿತ್ಯವು ಶರಣ ಸಜ್ಜನ ಬಂಧುಗಳಿಂದ ನಿರ್ಮಿತಗೊಂಡ ವಿಶ್ವಾಸದ ಸಾಹಿತ್ಯ ಸಾಮಾಜಿಕವಾಗಿ ನೊಂದವರ ಬದುಕಿನ ಬಗ್ಗೆ ತುಡಿತ-ಮಿಡಿತಗಳ ನಿತ್ಯ ಸತ್ಯ ಸಾಹಿತ್ಯ ಇದು ಶರಣರ ಕ್ರಾಂತಿ ಹೌದು ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ  ಎಮ್.ವಿ. ತ್ಯಾಗರಾಜ್ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ನಡೆದ ಉಪನ್ಯಾಸ ಹಾಗೂ ಕಾವ್ಯವಾಚನ, ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಇಂದು ಪ್ರತಿ ಒಂದು ಸಾವಿರ ಪುರುಷರಿಗೆ ಇಪ್ಪತ್ತೇಳು ಜನ ಸ್ತ್ರೀಯರು ಕಡಿಮೆಯಾಗುತ್ತಿದ್ದಾರೆ. ಅಂದರೆ 125 ಕೋಟಿ ಜನಸಂಖ್ಯೆಗೆ ಡಿಮೆಯಾಗುತ್ತಿರುವ ಮಹಿಳಾ ಲಿಂಗ ಪ್ರಮಾಣದ ಏರಿಳಿತ ಅನುಪಾತವು ಗಂಭೀರವಾಗಿ ಪರಿಗಣಿಸುವಂತದ್ದು ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಉದ್ಯೋಗ ವಿನಿಮಯ ಕಛೇರಿಯ ಸಹನಿರ್ದೇಶಕಿ ಸಾಧನಾ ಪೋಟೆ ಉಪನ್ಯಾಸಕಿಯಾಗಿ ಆಗಮಿಸಿ ಶರಣರ ವಚನ ತತ್ವಗಳಲ್ಲಿ ಮಹಿಳಾ ಪರ ಚಿಂತನೆ, ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಭಾರತೀಯ ಸಂಸ್ಕೃತಿ ಯಲ್ಲಿ ಮಹಿಳೆಗೆ ಉಚ್ಚ ಸ್ಥಾನವಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಸಾಧನಾ ಪೋಟೆ, ಮಂಗಲಾ ಮಠದ ಪಾರ್ವತಿ ಪಿಟಗಿ, ಮಲ್ಲವ್ವಾ ಮ್ಯಾಗೇರಿ ಹಾಗು ಶಕುಂತಲಾ ಬಿ. ವಿದ್ಯಾಪತಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಎಮ್.ಎಸ್. ಶಿರೂರ ಶಿವಕುಮಾರ ಭೋಜಶೆಟ್ಟರ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಅಧ್ಯಕ್ಷ ದುರ್ಗಾ ಯರಝರ್ವಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಉಪ್ಪಾರಟ್ಟಿ ಹಾಗೂ ಹಿರಿಯ ಸದಸ್ಯ ರಾಜೇಂದ್ರ ಜಿ. ಪಾಟೀಲ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin