ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾಗಿದ್ದ ಪತಿಗೆ 7ವರ್ಷ ಜೈಲು

Jail-Arrest

ಮೈಸೂರು, ಏ.20- ವರದಕ್ಷಿಣೆ ಕಿರುಕುಳದಿಂದ ಪತ್ನಿಯ ಸಾವಿಗೆ ಕಾರಣನಾಗಿದ್ದ ಪತಿಗೆ ಜೆಎಂಎಫ್‍ಸಿ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ 20ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.ಕೆ.ಆರ್.ನಗರ ವಾಸಿ ಮುನಾವರ್‍ಖಾನ್ ಶಿಕ್ಷೆಗೆ ಒಳಗಾದ ಪತಿ.ಮುನಾವರ್‍ಖಾನ್ ನಗರದ ರಜಿಯಾಭಾನು ಎಂಬುವರನ್ನು 2008ರಲ್ಲಿ ವಿವಾಹವಾಗಿದ್ದ. ವಿವಾಹ ಸಂದರ್ಭದಲ್ಲಿ ಆಕೆಯ ಕುಟುಂಬದವರು 75 ಸಾವಿರ ನಗದು ಮತ್ತು ಚಿನ್ನಾಭರಣ ನೀಡಿದ್ದರು ಎನ್ನಲಾಗಿದೆ.ಆದರೂ, ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ರಜಿಯಾಭಾನುಗೆ ಗಂಡ ಸೇರಿದಂತೆ ಕುಟುಂಬದವರು ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ರಜಿಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.  ವಿಚಾರಣೆ ಕೈಗೆತ್ತಿಕೊಂಡಿದ್ದ ಜೆಎಂಎಫ್‍ಸಿ ನ್ಯಾಯಾಲಯ ನ್ಯಾಯಾಧೀಶೆ ಸುಶೀಲಾ ಅವರು ಆರೋಪ ಆಭೀತಾದ ಹಿನ್ನೆಲೆಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 20ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಇನ್ನುಳಿದ ಮೂವರ ವಿರುದ್ಧ ಸೂಕ್ತ ಸಾಕ್ಷಿಗಳಿಲ್ಲದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin