ವರನಟ ಡಾ.ರಾಜ್ ಪುಣ್ಯಭೂಮಿ ಬಳಿಯ ಬಸ್ ನಿಲ್ದಾಣದ ಗತಿ ಅಧೋಗತಿ
ಬೆಂಗಳೂರು, ಅ.14-ನಗರದ ಕಂಠೀರವ ಸ್ಟುಡಿಯೋದಲ್ಲಿನ ವರನಟ ಡಾ.ರಾಜ್ಕುಮಾರ್ ಪುಣ್ಯಭೂಮಿ ಮುಂಭಾಗ ಇರುವ ಬಸ್ ನಿಲ್ದಾಣದ ಅಧೋಗತಿಯನ್ನು ನೋಡಿದರೆ ಎಂಥವರಿಗೂ ಬೇಸರವಾಗಿಬಿಡುತ್ತದೆ. ಡಾ.ರಾಜ್ ಪುಣ್ಯಭೂಮಿಯನ್ನು ವೀಕ್ಷಿಸಲು ಪ್ರತಿದಿನ ವಿವಿಧ ಭಾಗಗಳಿಂದ ನೂರಾರು ಮಂದಿ ಆಗಮಿಸುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲೇ ಬಸ್ ನಿಲ್ದಾಣ ಕಿತ್ತು ಹೋಗಿರುವುದು ನಾಚಿಕೆಗೇಡಿನ ಸಂಗತಿ. ಬಿಬಿಎಂಪಿಯವರಿಗೆ ಇದು ಕಾಣುವುದಿಲ್ಲವೇ ಎಂದು ಸ್ಥಳೀಯರು ಶಾಪ ಹಾಕುತ್ತಿದ್ದಾರೆ. ಈ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳು ಕಿತ್ತು ಹೋಗಿವೆ. ಬಸ್ ನಿಲ್ದಾಣದ ಮೇಲ್ಛಾವಣಿ ದುರಸ್ತಿಯಾಗಬೇಕಿದೆ. ಜೊತೆಗೆ ಡಾ.ರಾಜ್ ಪುಣ್ಯಭೂಮಿ ಬಸ್ ನಿಲ್ದಾಣ ಎಂಬ ಕನ್ನಡದ ನಾಮಫಲಕವನ್ನು ದೊಡ್ಡದಾಗಿ ಬರೆಯಿಸಿ ಹಾಕಬೇಕೆಂದು ಎಂ.ರಾಜಣ್ಣ ಸೇರಿದಂತೆ ಮತ್ತಿತರ ಅಭಿಮಾನಿಗಳು ಆಗ್ರಹಿಸಿದ್ದಾರೆ.
► Follow us on – Facebook / Twitter / Google+
Facebook Comments