ವರ್ತೂರು ಪ್ರಕಾಶ್ ಹಸುಗಳ ಹಾಲು ಮಾರಾಟ ನಿಷೇಧ, ಹಸುಗಳ ದಯಾಮರಣಕ್ಕೆ ಆದೇಶ
ಬೆಂಗಳೂರು, ಸೆ.4- ಶಾಸಕ ವರ್ತೂರು ಪ್ರಕಾಶ್ ಅವರ ಕೋಲಾರದ ಫಾರ್ಮ್ಹೌಸ್ನಲ್ಲಿರುವ ಹಸುಗಳ ಹಾಲು ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ. ಶಾಸಕರ ಫಾರ್ಮ್ಹೌಸ್ನಲ್ಲಿರುವ ಹಸುಗಳಲ್ಲಿ ಬ್ರುಸೆಲ್ಲೋಸಿಸ್ ಬ್ಯಾಕ್ಟೀರಿಯಾವಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಹಾಲು ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಸುಗಳಿಗೆ ದಯಾಮರಣಕ್ಕೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಧಿಕಾರಿಗಳ ತುರ್ತುಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರ್ಮ್ಹೌಸ್ನಲ್ಲಿರುವ 998 ಹಸುಗಳಲ್ಲಿ 49 ಹಸುಗಳಿಗೆ ಬ್ಯಾಕ್ಟೀರಿಯಾವಿರುವುದು ಪತ್ತೆಯಾಗಿದೆ.
ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಫಾರ್ಮ್ಹೌಸ್ನ ಸುತ್ತಮುತ್ತಲಿನ ಹಸುಗಳನ್ನು ಕೂಡ ಪರೀಕ್ಷೆಗೊಳಪಡಿಸಲು ಆದೇಶಿಸಲಾಗಿದೆ ಎಂದರು. ಈ ಬ್ಯಾಕ್ಟೀರಿಯಾವು ಹಸುವಿನಿಂದ ಮನುಷ್ಯರಿಗೂ ಹರಡುವ ಸಾಧ್ಯತೆಗಳಿವೆ ಎಂದು ಹೇಳಿದರು.
► Follow us on – Facebook / Twitter / Google+