ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೊಂದು ಖುಷಿ ಸುದ್ದಿ..!
ನವದೆಹಲಿ. ಡಿ.22 : ಸದ್ಯದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಮೆಸೇಜಿಂಗ್ ಆಪ್ ವಾಟ್ಸಾಪ್ ಬಳಕೆದಾರರಿಗೊಂದು ಸಿಹಿ ಸುದ್ದಿ ಇಲ್ಲಿದೆ. ನೀವು ಕ್ರೆಯೆಟ್ ಮಾಡಿದ ಗ್ರೂಪ್ ನಲ್ಲಿ ಯಾರಾದರೊಬ್ಬ ಸದಸ್ಯ ಕೆಟ್ಟಸಂದೇಶಗಳನ್ನು ಹಾಕಿದರೆ ಅದಕ್ಕೆ ಗ್ರೂಪ್ ಅಡ್ಮಿನ್ ಆದ ನೀವು ಹೊಣೆಗಾರರಾಗುವುದಿಲ್ಲ. ಹೌದು, ವಾಟ್ಸಾಪ್ ಗ್ರೂಪ್ ನಲ್ಲಿ ಯಾವುದೇ ಸದಸ್ಯ ಮಾನಹಾನಿಯಾಗುವಂತಹ ಸಂದೇಶಗಳನ್ನು ಕಳುಹಿಸಿದಲ್ಲಿ ಅದಕ್ಕೆ ಗ್ರೂಪ್ ಅಡ್ಮಿನ್ ಜವಾಬ್ದಾರರಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವಾಟ್ಸಾಪ್ ಗ್ರೂಪ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯೋಗಿ ಆಶಿಶ್ ಭಲ್ಲಾ ಎಂಬಾತನನ್ನು ಟಾರ್ಗೆಟ್ ಮಾಡಲಾಗಿತ್ತು, ಇದ್ರಿಂದಾಗಿ ಆತ ಕೆಲಸವನ್ನೇ ಬಿಟ್ಟಿದ್ದ. ಮನೆ ಕೊಳ್ಳಲು ಮುಂದಾಗಿದ್ದವರು ಇದರಿಂದ ಅಸಮಾಧಾನಗೊಂಡಿದ್ದರು. ಇದಕ್ಕೆಲ್ಲ ಗ್ರೂಪ್ ಆಡ್ಮಿನ್ ಹೊಣೆ ಅಂತಾ ಆರೋಪಿಸಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಲಾತುರ್ ಹಾಗೂ ಛತ್ತೀಸ್ ಗಢದಲ್ಲಿ ಕೂಡ ಆಕ್ಷೇಪಾರ್ಹ ಕಂಟೆಂಟ್ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಮ್ ಅಡ್ಮಿನ್ ಗಳನ್ನೇ ಹೊಣೆ ಮಾಡಲಾಗಿತ್ತು. ಆನ್ ಲೈನ್ ವೇದಿಕೆಯೊಂದನ್ನು ರೂಪಿಸಿದಾಗ ಆ ಗ್ರೂಪ್ ನ ಯಾವುದೇ ಸದಸ್ಯರು ಆಕ್ಷೇಪಾರ್ಹ ಮತ್ತು ಮಾನನಷ್ಟಕರ ಕಂಟೆಂಟ್ ಗಳನ್ನು ಕಳಿಸಿದಲ್ಲಿ ಅದಕ್ಕೆ ಗ್ರೂಪ್ ಅಡ್ಮಿನ್ ಜವಾಬ್ದಾರನಾಗಿರುವುದಿಲ್ಲ. ಅಡ್ಮಿನಿಸ್ಟ್ರೇಟರ್ ನನ್ನು ಹೊಣೆಗಾರನನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದುದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.