ವಾನ್‍ಗೆ ಅಪ್ಪಳಿಸಿದ ಬಸ್ ಸ್ಫೋಟಗೊಂಡು 15 ಮಂದಿ ಸಾವು

Spread the love

Bus-Blast

ಢಾಕಾ, ಫೆ.10-ವಾನ್‍ಗೆ ರಭಸದಿಂದ ಅಪ್ಪಳಿಸಿದ ಬಸ್ ಸ್ಫೋಟಗೊಂಡು 15ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಇತರ 20 ಮಂದಿ ಗಾಯಗೊಂಡಿರುವ ಘಟನೆ ವಾಯುವ್ಯ ಬಾಂಗ್ಲಾದೇಶದಲ್ಲಿ ಸಂಭವಿಸಿದೆ. ಫರಿದ್‍ಪುರ್ ಜಿಲ್ಲೆಯಲ್ಲಿ ಢಾಕಾ ಮತ್ತು ಖುಲ್ನಾ ಪಟ್ಟಣಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸಿಎನ್‍ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಬಸ್ ವ್ಯಾನ್‍ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ತಗುಲಿ ಸ್ಫೋಟಗೊಂಡಿತು. ಬಸ್‍ನ ಸಿಲಿಂಡರ್‍ನಲ್ಲಿದ್ದ ಅನಿಲ ಸ್ಫೋಟದಿಂದ ಈ ಭಾರೀ ಅನಾಹುತ ಸಂಭವಿಸಿದೆ ಎಂದು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.   ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ 20ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin